6 ಗಂಟೆಗಳ ತನಕ ವಿಚಾರಣೆ ಎದುರಿಸಿದ ಪಿ. ಚಿದಂಬರಂ

ನವದೆಹಲಿ: ಅದ್ಯಾಕೋ ಏರ್ಸೆಲ್​ ಮ್ಯಾಕ್ಸಿಸ್ ಹಗರಣ ಹಿರಿಯ ಕಾಂಗ್ರೆಸ್​​ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂರನ್ನು ಬಿಡ್ತಾನೇ ಇಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಚಿದಂಬರಂ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಿದ್ದರು. ಜಾರಿ ನಿರ್ದೇಶನಾಲಯವು ಪಿ.ಚಿದಂಬರಂ ರನ್ನು ಬರೋಬ್ಬರಿ 6 ಗಂಟೆಗಳ ಕಾಲ ವಿಚಾರಣೆ ನಡೆಸಿತು. ಎರಡನೇ ಹಂತದ ವಿಚಾರಣೆ ಮುಗಿದಿದ್ದು ನನ್ನ ವಿರುದ್ಧ ಯಾವುದೇ ಎಫ್ಐಆರ್​ ದಾಖಲಾಗಿಲ್ಲ ಅಂತ ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಕಳೆದ ಏಪ್ರಿಲ್​ನಲ್ಲಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂರನ್ನು ವಿಚಾರಣೆ ನಡೆಸಲಾಗಿತ್ತು. 2006 ರಲ್ಲಿ ನಡೆದ ಈ ಹಗರಣದಲ್ಲಿ ಅಂದು ಹಣಕಾಸು ಸಚಿವರಾಗಿದ್ದಂತಹ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಕೈವಾಡ ಇದೆ ಎಂದು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಶಂಕೆ ವ್ಯಕ್ತಪಡಿಸಿವೆ. ಕಾರ್ತಿ ಚಿದಂಬರಂ ವಿರುದ್ಧ ಚಾರ್ಜ್​ಶೀಟ್ ದಾಖಲಾಗುವ ಸಾಧ್ಯತೆಗಳು ಹೆಚ್ಚಿವೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv