ಇಡಿ ಎಫ್​.ಐ.ಆರ್​ ದಾಖಲು ಹಿನ್ನೆಲೆ: ಶಿಕ್ಷಕರ ಕಾರ್ಯಕ್ರಮಕ್ಕೆ ಡಿಕೆಶಿ ಗೈರು

ರಾಮನಗರ: ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಮೇಲೆ ಜಾರಿ ನಿರ್ದೇಶನಾಲಯ ಎಫ್​.ಐ.ಆರ್​​ ದಾಖಲು ಮಾಡಿದೆ. ಈ ಹಿನ್ನೆಲೆಯಲ್ಲಿ ಕನಕಪುರ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಸಚಿವ ಡಿಕೆಶಿ ಗೈರಾಗಿದ್ದಾರೆ.

ಕನಕಪುರ ನಗರದ ಮುನ್ಸಿಪಲ್​​ ಗ್ರೌಂಡ್‌ನಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಸದ ಡಿ.ಕೆ. ಸುರೇಶ್​​ ಮತ್ತು ಸಚಿವ ಡಿ.ಕೆ. ಶಿವಕುಮಾರ್​​ ಹಾಜರಾಗಬೇಕಿತ್ತು. ಜಾರಿ ನಿರ್ದೇಶನಾಲಯ ಸಚಿವ ಡಿಕೆಶಿ ಮೇಲೆ ಎಫ್​.ಐ.ಆರ್​​ ದಾಖಲು ಮಾಡಿದ್ದರಿಂದಾಗಿ ಕಾರ್ಯಕ್ರಮಕ್ಕೆ ಸಹೋದರರು ಹಾಜರಾಗಿಲ್ಲ.

ಇನ್ನು, ಫುಡ್​ ಪಾಯಿಸನ್​​ ಆಗಿದೆ ಎಂದು ಬೆಂಗಳೂರಿನಿಂದ ಕನಕಪುರದ ಅವರ ನಿವಾಸಕ್ಕೆ ಡಿ.ಕೆ. ಶಿವಕುಮಾರ್​ ಆಗಮಿಸಿದ್ದಾರೆ ಎನ್ನಲಾಗಿದೆ.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv