ಪರಿಸರ ವಿಜ್ಞಾನಿಗೂ ಬಿಡದ ವಾಮಾಚಾರದ ಕಾಟ.!

ದಾವಣಗೆರೆ: ದುಬೈನಲ್ಲಿ ಪರಿಸರ ವಿಜ್ಞಾನಿಯಾಗಿರುವ ಡಾ.ಸುರೇಶ್ ಎನ್ನುವವರ ಹೊಸ ಮನೆಯ ಬಳಿ ವಾಮಾಚಾರ ಮಾಡಿದ ಘಟನೆ ನಗರದ ತರಳಬಾಳು ಬಡಾವಣೆಯಲ್ಲಿ ನಡೆದಿದೆ.
ಪರಿಸರ ವಿಜ್ಞಾನಿ ಡಾ.ಸುರೇಶ್ ಅವರ ನೂತನ ಬಿಲ್ಡಿಂಗ್​ ಬಳಿ ಮೊಟ್ಟೆ, ಲಿಂಬೆಹಣ್ಣು, ಅರಿಶಿಣ, ಕುಂಕುಮ ಹಚ್ಚಿ ಬೊಂಬೆಗೆ ಮೊಳೆ ಹೊಡೆದು ಪೂಜೆ ಮಾಡಲಾಗಿದೆ. ಸುರೇಶ್​ ಹಾಗೂ ಅವರ ಸಹೋದರರ ಮಧ್ಯೆ ವ್ಯವಹಾರದ ವಿಚಾರವಾಗಿ ಕೆಲ ದಿನಗಳ ಹಿಂದೆ ಜಗಳವಾಗಿತ್ತು. ಇದೇ ಕಾರಣಕ್ಕೆ ಸುರೇಶ್​ರ ಸಹೋದರರು ವಾಮಾಚಾರ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಸುರೇಶ್​ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರ ವಿಚಾರಣೆಯಿಂದ ವಾಮಾಚಾರ ಯಾರು ಮಾಡಿದ್ದಾರೆ ಅನ್ನೋದು ತಿಳಿಯ ಬೇಕಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv