ಯೋಗಿ ಆದಿತ್ಯನಾಥ್, ಮಾಯಾವತಿಗೆ ಚುನಾವಣಾ ಆಯೋಗದ ನೋಟಿಸ್

ನವದೆಹಲಿ: ನೀತಿ ಸಂಹಿತೆ ಉಲ್ಲಂಘನೆ ಆರೋಪದ ಹಿನ್ನೆಲೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಮಾಯಾವತಿ, ಏಪ್ರಿಲ್ 7ರಂದು ದಿಯೋಬಂಡ್​ನಲ್ಲಿ ತಮ್ಮ ಪ್ರಚಾರದ ವೇಳೆ ಮಾಡಿದ ಭಾಣಷ ಹಾಗೂ ಏಪ್ರಿಲ್ 9ರಂದು ಮೀರತ್​ನಲ್ಲಿ ಯೋಗಿ ಆದಿತ್ಯನಾಥ್ ಮಾಡಿದ್ದ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಅಂತ ಶೋಕಾಸ್ ನೋಟಿಸ್ ನೀಡಲಾಗಿದೆ. ಮೀರತ್​ನಲ್ಲಿ ನಡೆದ ಱಲಿಯಲ್ಲಿ ಯೋಗಿ ಆದಿತ್ಯನಾಥ್ ಮಾಡಿದ್ದ ‘ಅಲಿ’ ‘ಭಜರಂಗಬಲಿ’ ಹೇಳಿಕೆ ಮಾಡೆಲ್ ಕೋಡ್ ಆಫ್ ಕಂಡಕ್ಟ್​ನ ಉಲ್ಲಂಘನೆ. ಇದಕ್ಕೆ ನೀವು ಶುಕ್ರವಾರ ಸಂಜೆಯೊಳಗೆ ಉತ್ತರಿಸಬೇಕು ಅಂತ ಚುನಾವಣಾ ಆಯೋಗ ಹೇಳಿದೆ.

ಇನ್ನು ದಿಯೋಬಂಡ್​ನಲ್ಲಿ ಪ್ರಚಾರದ ವೇಳೆ ಮಾಯಾವತಿ, ಮುಸ್ಲಿಮ್ ಮತದಾರರಿಗೆ ಒಂದು ನಿದಿರ್ಷ್ಟ ಪಕ್ಷಕ್ಕೆ ಮತ ಹಾಕದಂತೆ ಕರೆ ನೀಡಿದ್ದರು. ಇದು ಕೂಡ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, 24 ಗಂಟೆಯೊಳಗೆ ಉತ್ತರಿಸುವಂತೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ.