‘ಮೋದಿ ಬಯೋಪಿಕ್ ವೀಕ್ಷಿಸಿ ಚುನಾವಣಾ ಆಯೋಗ ಖುಷಿಪಟ್ಟಿದೆ’

ಮೋದಿ ಜೀವನಾಧಾರಿತ ಚಿತ್ರ ‘ಪಿಎಂ ನರೇಂದ್ರ ಮೋದಿ’ ಸಿನಿಮಾವನ್ನ ನೋಡಿ ಚುನಾವಣಾ ಆಯೋಗ ಸಂತೋಷ ವ್ಯಕ್ತಪಡಿಸಿದೆಯಂತೆ. ಹೀಗಂತ ಸಿನಿಮಾದಲ್ಲಿ ಮೋದಿ ಪಾತ್ರ ನಿರ್ವಹಿಸಿರುವ ವಿವೇಕ್ ಒಬೆರಾಯ್ ಹೇಳಿದ್ದಾರೆ.
ಚುನಾವಣಾ ಆಯೋಗದ ಎಲ್ಲಾ ಅಧಿಕಾರಿಗಳು ಚಿತ್ರವನ್ನು ವೀಕ್ಷಿಸಿದ್ದಾರೆ. ವೀಕ್ಷಣೆ ಬಳಿಕ ಚಿತ್ರ ಹೇಗಿದೆ ಎಂದು ಅವರನ್ನು ಕೇಳಿದೆ. ಅವರಿಂದ ಸಕಾರಾತ್ಮಕವಾದ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೇ ಚಿತ್ರವನ್ನು ನೋಡಿ ಅವರೆಲ್ಲಾ ಸಂತೋಷವನ್ನು ವ್ಯಕ್ತಪಡಿಸಿದ್ರು. ಹೀಗಾಗಿ ಸಿನಿಮಾ ಬಿಡುಗಡೆಗೆ ಚುನಾವಣಾ ಆಯೋಗದ ಅಧಿಕಾರಿಗಳು ಅವಕಾಶ ಕಲ್ಪಿಸ್ತಾರೆ ಎನ್ನುವ ವಿಶ್ವಾಸ ಇದೆ ಎಂದಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ಚಿತ್ರವನ್ನು ರಿಲೀಸ್ ಮಾಡದಂತೆ ಚುನಾವಣಾ ಆಯೋಗ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಚಿತ್ರ ತಂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸಿನಿಮಾವನ್ನು ವೀಕ್ಷಿಸಿ ಬಳಿಕ ಬಿಡುಗಕಡೆ ಮಾಡಬೇಕೇ ಅಥವಾ ನಿಷೇಧ ಹೇರಬೇಕೆ ಎಂಬುದರ ಬಗ್ಗೆ ನಿರ್ಣಯಿಸಿ ಅಂತಾ ಸೂಚನೆ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಚುನಾವಣಾ ಆಯೋಗದ ಅಧಿಕಾರಿಗಳು ಚಿತ್ರವನ್ನು ವೀಕ್ಷಿಸಿದ್ದಾರೆ.ಇದೀಗ ನಮೋ ಸಿನಿಮಾಕ್ಕೆ ಚುನಾವಣಾ ನೀತಿ ಸಂಹಿತೆಯ ನಡುವೆಯು ಬಿಡುಗಡೆ ಭಾಗ್ಯ ಸಿಗುತ್ತೋ ಅಥವಾ ನಿಷೇಧದ ಭಾಗ್ಯ ಮುಂದುವರಿಯುತ್ತೋ ಕಾದು ನೋಡಬೇಕಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv