ಶ್ರೀಲಂಕಾದಲ್ಲಿ ಪೈಶಾಚಿಕ ಸರಣಿ ಸ್ಫೋಟ; ಭಾರತೀಯರಿಗಾಗಿ ಸಹಾಯವಾಣಿ

ಕೊಲೊಂಬೊ: ಶ್ರೀಲಂಕಾದಲ್ಲಿ ಇಂದು ಬೆಳಗ್ಗೆ ಎಂಟು ಕಡೆ ಸರಣಿ ಸ್ಫೋಟ ನಡೆದಿದೆ. ಈ ಪೈಶಾಚಿಕ ಕೃತ್ಯವನ್ನುಐಸಿಸ್​ ಉಗ್ರರು ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಸಾವು, ನೋವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ವರದಿಗಳ ಪ್ರಕಾರ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನು, ಸ್ಫೋಟ ಸಂಬಂಧ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನರ್​​ ಜೊತೆ ಸಂಪರ್ಕದಲ್ಲಿದ್ದೇವೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಅಂತಾ ಹೇಳಿದ್ದಾರೆ. ಅಲ್ಲದೇ ಶ್ರೀಲಂಕಾದಲ್ಲಿರೋ ಭಾರತೀಯ ರಾಯಭಾರಿ ಕಚೇರಿ ಮಾಡಿರುವ ಟ್ವೀಟ್​ ಅನ್ನ ಶೇರ್​ ಮಾಡಿದ್ದಾರೆ. ಶ್ರೀಲಂಕದಾ ಕೊಲೊಂಬೊ ಮತ್ತು ಬಟ್ಟಿಕಲೈನಲ್ಲಿ ಸ್ಫೋಟ ಸಂಭವಿಸಿರುವ ವರದಿಯಾಗಿದೆ. ನಾವು ಪರಿಸ್ಥಿತಿ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದೇವೆ. ನೆರವಿನ ಅಗತ್ಯ ಇರುವ ಎಲ್ಲಾ ಭಾರತೀಯರು ನಮ್ಮನ್ನ ಸಂಪರ್ಕಿಸಬಹುದು ಎಂದು +94777903082 +94112422788 +94112422789 ನಂಬರ್​​ಗಳನ್ನ ನೀಡಿದ್ದಾರೆ. ಭಾರತೀಯರು ಸಹಾಯಕ್ಕಾಗಿ ಈ ನಂಬರ್​ಗಳನ್ನ ಸಂಪರ್ಕಿಸಬಹುದು ಅಂತಾ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv