ಹುಬ್ಬಳ್ಳಿಗೆ ತಲುಪಿದ ವಚನಾನಂದ ಶ್ರೀಗಳ ಪಾದಯಾತ್ರೆ

ಹುಬ್ಬಳ್ಳಿ:ಕಿತ್ತೂರು ಚೆನ್ನಮ್ಮ ಸ್ಮಾರಕವನ್ನ ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಬೇಕು ಅಂತ ಆಗ್ರಹಿಸಿ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ನಡೆಸಿರುವ ಪಾದಯಾತ್ರೆ ಈಗ ಹುಬ್ಬಳ್ಳಿಗೆ ತಲುಪಿದೆ. ಚೆನ್ನಮ್ಮ ಸ್ಮಾರಕ ರಾಷ್ಟ್ರೀಯ ಸ್ಮಾರಕವಾಗಬೇಕು ಅಂತ ಒತ್ತಾಯಿಸಿ ಹರಿಹರದಿಂದ ಕಿತ್ತೂರಿನವರೆಗೆ ಪಾದಯಾತ್ರೆ ಮಾಡಲಾಗುತ್ತಿದೆ ಅಂತ ವಚನಾನಂದ ಸ್ವಾಮೀಜಿಗಳು ಹೇಳಿದ್ದಾರೆ. ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಮಾತನಾಡಿದ ಶ್ರೀಗಳು ಮೇ 11ರಿಂದ ಹರಿಹರದಿಂದ ಪಾದಯಾತ್ರೆ ಕೈಗೊಳ್ಳಲಾಗಿತ್ತು. ಇಂದು ಹಾವೇರಿಯ ಶಿಗ್ಗಾವಿ ತಾಲೂಕಿನಿಂದ ಹುಬ್ಬಳ್ಳಿಗೆ ಪಾದಯಾತ್ರೆ ನಡೆಸಲಾಗಿದೆ. ನಾಳೆ ಧಾರವಾಡ ಮಾರ್ಗವಾಗಿ ಸಾಗುವ ಪಾದಯಾತ್ರೆ ಜೂನ್ 9 ರಂದು ಬೈಲಹೊಂಗಲ ತಾಲೂಕು ತಲುಪಲಿದೆ. ಇನ್ನು ಪಾದಯಾತ್ರೆಯೂದ್ದಕ್ಕು ದೇಶಪ್ರೇಮ ಹಾಗೂ ಯೋಗದ ಬಗ್ಗೆ ಅರಿವು ಮೂಡಿಸಲಾಗುವುದು ಜೂನ್ 10 ರಂದು ಕಿತ್ತೂರು ಚೆನ್ನಮ್ಮ ಸ್ಮಾರಕ ತಲುಪಿ ರಾಣಿ ಚೆನ್ನಮ್ಮ ಸ್ಮಾರಕಕ್ಕೆ ಪೂಜೆ ಸಲ್ಲಿಸಲಾಗುವುದು ಅಂತ ಶ್ರೀಗಳು ಹೇಳಿದ್ದಾರೆ. ನಂತರ ಕಿತ್ತೂರಿನಲ್ಲಿ ಬಹಿರಂಗ ಸಮಾವೇಶ ನಡೆಸಿ ಸ್ಮಾರಕವನ್ನು ರಾಷ್ಟ್ರೀಯ ಸ್ಮಾರಕ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಅಂತ ವಚನಾನಂದ ಶ್ರೀಗಳು ನಿರ್ಧಾರ ವ್ಯಕ್ತಪಡಿಸಿದ್ದಾರೆ.