ದ್ವಾರಕೀಶ್​ ನಿರ್ಮಾಣದ ಅಮ್ಮ ಐ ಲವ್ ಯು ಚಿತ್ರ ಬಿಡುಗಡೆಗೆ ಸಜ್ಜು

ಹುಬ್ಬಳ್ಳಿ: ಸ್ಯಾಂಡಲ್​ವುಡ್​ ಹಿರಿಯ ನಟ, ನಿರ್ದೇಶಕ ದ್ವಾರಕೀಶ್​ ನಿರ್ಮಾಣದ 51ನೇ ಚಿತ್ರ ಅಮ್ಮ ಐ ಲವ್​ ಯು ಇದೇ 15ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ರಾಜ್ಯದ 150 ಚಿತ್ರಮಂದಿರ ಸೇರಿದಂತೆ ಯುಎಸ್​ಎ, ಯುಕೆಯಂತಹ ಹೊರದೇಶಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ಕೆ.ಎಂ ಚೈತನ್ಯ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಚಿತ್ರವನ್ನು ತಮಿಳು ನಾಡಿನಲ್ಲಿ ನಡೆದ ನೈಜ ಘಟನೆ ಅಂಶಗಳನ್ನು ಆಧಾರಿಸಿ ಚಿತ್ರದ ಕಥೆ ಮಾಡಲಾಗಿದೆ. ಕಮರ್ಷಿಯಲ್​ ಹಾಗೂ ತಾಯಿಯ ಮಹತ್ವವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸಮಾಜಕ್ಕೆ ತಾಯಿ ಮಹತ್ವದ ಬಗ್ಗೆ ತೋರಿಸಲಾಗಿದೆ. ಅಲ್ಲದೇ ಅಮ್ಮನಿಗಾಗಿ ಮಗ ಯಾವ ರೀತಿ ತ್ಯಾಗ ಮಾಡುತ್ತಾನೆ ಎಂಬ ಮಹತ್ವವನ್ನು ತಿಳಿಸುವ ಕೆಲಸ ದ್ವಾರಕೀಶ್​ ಪ್ರೋಡಕ್ಷನ್​ನಲ್ಲಿ ಮಾಡಿದ್ದಾರೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಕುಟುಂಬ ಸಮೇತರಾಗಿ ಕುಳಿತು ನೋಡುವ ಚಿತ್ರವಾಗಿದೆ ಎಂದು ನಿರ್ದೇಶಕ ಚೈತನ್ಯ ಹೇಳಿದರು.
ಇನ್ನು ಚಿತ್ರದ ನಟ ಚಿರಂಜೀವಿ ಸರ್ಜಾ ಮಾತನಾಡಿ, ಚಿತ್ರದ ಹಾಡುಗಳನ್ನು ಯುಟ್ಯೂಬ್​ನಲ್ಲಿ ಸಾಕಷ್ಟು ಜನರು ಕೇಳಿ ಲೈಕ್​ ಮಾಡಿದ್ದಾರೆ. ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದು ಹೇಳಿದರು. ಚಿತ್ರದ ನಾಯಕಿ ನಿಶ್ವಿಕಾ ಮಾತನಾಡಿ, ಇದು ನನ್ನ ಮೊದಲ ಅಭಿನಯದ ಚಿತ್ರದಲ್ಲಿ ನಿರ್ದೇಶಕ ಚೈತನ್ಯ ಹಾಗೂ ನಟ ಚಿರಂಜೀವಿ ಒಳ್ಳೆಯ ಮಾರ್ಗದರ್ಶನ ನೀಡಿದ್ದಾರೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಂದು ನಿಸ್ವಿಕಾ ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv