ವಿಮಾನದಲ್ಲಿ ಜಗಳ.. ರಕ್ಷಣೆಗೆ ಬಂದವು F-16 ಯುದ್ಧ ವಿಮಾನ..!

ಗಲಾಟೆ, ಜಗಳ, ಕಿತ್ತಾಟ, ಹೊಡೆದಾಟ. ಬಡಿದಾಟ ಎಲ್ಲಿ ಆಗಲ್ಲ ಹೇಳಿ..? ನಿಮ್ಮನ್ನ ಕೇಳಿದ್ರೆ ಎಲ್ಲಾ ಕಡೆ ನಡೆಯುತ್ತೆ ಬಿಡು ಗುರೂ..! ಅದೇನ್ ಮಹಾ.? ಮನುಷ್ಯರು ಅಂದ್ಮೇಲೆ ಜಗ್ಳಾ-ಗಿಗ್ಳಾ ಮಾಮೂಲಿ ಕೇಳೋಕೂ ಬ್ಯಾರೆ ಕ್ಯಾಮೇ ಇಲ್ವಾ ಅಂತಿರಾ! ಅಂದ್ಹಾಗೆ ನಾವೀಗ ಹೇಳ್ತೀರೋ ಮ್ಯಾಟ್ರು ಸ್ವಲ್ಪ ಡಿಫರೆಂಟಾಗಿದೆ. ಮನೇಲಿ ಸಿಕ್ಕಾಪಟ್ಟೆ ಟಾರ್ಚರ್​ ಕೊಟ್ರೆ ಒದ್ದು ಹೊರಗೆ ಹಾಕ್ತಾರೆ.. ಸಾರ್ವಜನಿಕ ಪ್ಲೇನ್​ನಲ್ಲಿ ಕಿರಿಕ್ ಮಾಡಿದ್ರೆ ಬೆನ್ನು ಮುರೀತಾರೆ.. ಆಟೋದಲ್ಲಿ, ಬಸ್​​ನಲ್ಲಿ, ಟ್ರೈನ್​ನಲ್ಲಿ ಕ್ವಾಟ್ಲೆ ಕೊಟ್ರೆ ನಾಲ್ಕು ಬಿಟ್ಟು ಕೆಳಗಿಳಿಸಿ ಹೋಗ್ಬಹುದು. ಆದ್ರೆ ವಿಮಾನದಲ್ಲಿ ಕಿರಿಕ್ ಮಾಡಿದ್ರೆ..? ಏನ್ಮಾಡ್ಲಿಕ್ಕೆ ಸಾಧ್ಯ..? ಇಂಥ ಒಂದು ಪ್ರಶ್ನೆ ಇವತ್ತು ಎದ್ದಿತ್ತು. ಅಬುಧಾಬಿಯಿಂದ ಆಮ್ಸ್ಟರ್ಡ್ಯಾಮ್​​ ಕಡೆ ಏರ್​ಲೈನ್ ವಿಮಾನ ಹೊರಟಿತ್ತು. ಈ ವೇಳೆ ಅಮೆರಿಕನ್ ಪ್ರಯಾಣಿಕರೊಬ್ಬರು ಸೀಟ್​ ವಿಚಾರಕ್ಕೆ ಕ್ಯಾತೆ ತೆಗೆದಿದ್ದಾರೆ. ನೋಡ ನೋಡುತ್ತಿದ್ದಂತೆ ಅವ್ರ ಧ್ವನಿ ಜೋರಾಗಿದೆ. ಆಗ ವಿಮಾನದಲ್ಲಿ ಸಹ ಪ್ರಯಾಣಿಕರು ಅವರತ್ತ ಗುರ್ ಗುರ್ ಅಂತಾ ನೋಡಿದ್ದಾರೆ. ವಿಮಾನದ ಸಿಬ್ಬಂದಿ ಸುಮ್ಮನಿರುವಂತೆ ಹೇಳಿ ನೋಡಿದ್ದಾರೆ. ಬಹುಶಃ ಅವ್ರ ಕೋಪ ನೆತ್ತಿಗೇರಿತ್ತು ಅನ್ಸುತ್ತೆ. ಜೋರಾಗಿ ಕೂಗಾಡಿದ್ದಾರೆ. ಇದ್ರಿಂದ ಪ್ರಯಾಣಿಕರೆಲ್ಲಾ ಗಾಬರಿಗೊಂಡಿದ್ದಾರೆ. ಗಲಾಟೆ ನೋಡಿ ಪ್ರಯಾಣಿಕರ ಜೀವ ಕೈಗೆ ಬಂದಿತ್ತು. ಸೀಟು ವಿಚಾರಕ್ಕೆ ಪ್ರಾಣ ಕಳೆದುಕೊಳ್ಳಬೇಕಾಗುತ್ತಲ್ಲಾ ಅಂತಾ ಹೆದರಿಕೆ ಶುರುವಾಯ್ತು. ಬಸ್ಸೋ.. ಟ್ರೈನೋ ಆದ್ರೆ ಅವ್ರನ್ನ ಕೆಳಗೆ ಇಳಿಸಿ ಹೋಗ್ತಿದ್ರೇನೋ..? ಆದ್ರೆ ಇಲ್ಲಿ ಹಾಗೆ ಮಾಡುವಂತಿಲ್ಲ. ಮುಟ್ಟಬೇಕಾದ ಸ್ಥಳದವರೆಗೂ ಅವ್ರ ಗಲಾಟೆಯನ್ನ ಸಹಿಸಿಕೊಳ್ಳೋಣ ಅಂದ್ರೆ ವಿಮಾನಕ್ಕೆ ಅಪಾಯ ತಂದೊಡ್ಡುವ ಮಾತುಗಳನ್ನ ಆ ಪ್ರಯಾಣಿಕ ಆಡ್ತಿದ್ದ ಎನ್ನಲಾಗಿದೆ. ಏನ್ಮಾಡೋದಪ್ಪ ಅಂತಾ ಯೋಚ್ನೆ ಮಾಡ್ತಿದ್ದ ಸಿಬ್ಬಂದಿ ಕೊನೆಗೆ ಕಂಟ್ರೋಲ್ ರೂಮ್​ಗೆ ಕಾಲ್ ಮಾಡಿದ್ದಾರೆ. ಪ್ರಯಾಣಿಕನಿಂದ ವಿಮಾನಕ್ಕೇ ಅಪಾಯ ಇದೆ ಅಂತಾ ಅರಿತ ಅವರು, ‘ಡಚ್​ ಏರ್​ ಫೋರ್ಸ್’​ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ವಿಮಾನದ ರಕ್ಷಣೆಗೆ ಎರಡು ಎಫ್​-16 ಫೈಟರ್​ ಅನ್ನ ಕಳುಹಿಸಿಕೊಟ್ಟಿದ್ದಾರೆ. ನಂತರ ಪ್ರಯಾಣದ ಉದ್ದಕ್ಕೂ ಏರ್​ಲೈನ್ ವಿಮಾನಕ್ಕೆ ಎರಡು ಫೈಟರ್​ ವಿಮಾನಗಳು ರಕ್ಷಣೆ ನೀಡಿವೆ. ನಂತ್ರ ವಿಮಾನ Schiphol airport ಗೆ ಸುರಕ್ಷಿತವಾಗಿ ಬಂದಿಳಿಯುತ್ತಿದ್ದಂತೆ ಕಿರಿಕ್ ಪಾರ್ಟಿಯನ್ನ ಪೊಲೀಸರು ಅರೆಸ್ಟ್​ ಮಾಡಿದ್ದಾರೆ!