ಇಂದಿನಿಂದ 3 ದಿನ ಗುಡುಗು ಸಹಿತ ಮಳೆ ಸಾಧ್ಯತೆ

ದೆಹಲಿ: ಹವಾಮಾನ ಬದಲಾವಣೆಯಿಂದ ವಾಯವ್ಯ ಭಾರತದ ಬಹುತೇಕ ಭಾಗಗಳಲ್ಲಿ ಏಪ್ರಿಲ್ 15ರಿಂದ ಏಪ್ರಿಲ್ 17ರವರೆಗೆ ಧೂಳು ಸಹಿತ ಬಿರುಗಾಳಿ ಬೀಸಲಿದೆ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಅಂತಾ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೆಹಲಿ, ಹರಿಯಾಣ, ಪಂಜಾಬ್‌ ಮತ್ತು ರಾಜಸ್ಥಾನ ಸೇರಿ ಹಲವೆಡೆ ಇಂದಿನಿಂದ ಮೂರು ದಿನಗಳ ಕಾಲ ಧೂಳು ಸಹಿತ ಬಿರುಗಾಳಿ ಮತ್ತು ಮಳೆ ಬರಲಿದೆ ಅಂತಾ ಎಚ್ಚರಿಸಿದೆ. ಪಶ್ಚಿಮ ಭಾಗದ ಮೆಡಿಟೇರಿಯನ್​ ವಲಯದಲ್ಲಿ ಉಂಟಾಗಿರುವ ತಂಪು ಗಾಳಿಯೊಂದಿಗೆ ಹುಟ್ಟುವ ಬಿರುಗಾಳಿಯ ಪರಿಣಾಮದಿಂದ ಉತ್ತರ ಭಾರತ ಹಾಗೂ ವಾಯವ್ಯ ಭಾರತದಲ್ಲಿ ಭಾರೀ ಮಳೆಯಾಗಲಿದೆ ಎಂದು ಹೇಳಲಾಗಿದೆ. ಈಗಾಗಲೇ ಏಪ್ರಿಲ್ 13ರ ಶನಿವಾರದಂದು ಈಶಾನ್ಯ ರಾಜ್ಯಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಗಂಟೆಗೆ ಸುಮಾರು 50 ರಿಂದ 60 ಕಿಲೋಮೀಟರ್​ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಬಿಹಾರ, ಕೇರಳ, ಕರ್ನಾಟಕದ ಒಳನಾಡು, ತೆಲಂಗಾಣ, ಜಾರ್ಖಂಡ್​, ಮಹಾರಾಷ್ಟ್ರ, ಮಧ್ಯಪ್ರದೇಶ ಕೂಡ ಬಿರುಗಾಳಿಯ ಹೊಡೆತಕ್ಕೆ ಸಿಲುಕಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಸಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv