ನಕಲಿ ಪ್ರಮಾಣ ಪತ್ರ ಹಾವಳಿ, ಸಿಕ್ಕಿಬಿದ್ದ ಖದೀಮರು

ಗದಗ: ಗದಗ ಜಿಲ್ಲೆಯಲ್ಲಿ ಸದ್ದಿಲ್ಲದೆ ನಕಲಿ ಪ್ರಮಾಣ ಪತ್ರ ಮಾಡುತ್ತಿರುವ ಕೃತ್ಯ ತಲೆ ಎತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹೊರಗುತ್ತಿಗೆ ನೌಕರರಾದ ಸುನೀಲ್ ಹಿರೇಮಠ, ಅಶ್ವಿನಿ ಹಾಗೂ ಮಂಜುನಾಥ್ ಎಂಬುವವರು ಆರೋಗ್ಯ ಇಲಾಖೆಯ ನಕಲಿ ಸೀಲ್​​ ಹಾಗೂ ವೈದ್ಯರ ನಕಲಿ ಸಹಿ ಹಾಕಿ ಪ್ರಮಾಣ ಪತ್ರ ನೀಡುತ್ತಿದ್ದು, 2-3 ಸಾವಿರ ಹಣ ಪಡೆದು ಈ ನಕಲಿ ಪ್ರಮಾಣ ಪತ್ರವನ್ನು ಮಾರಾಟ ಮಾಡುತ್ತಿದ್ದರು. ಸದ್ಯ ಈ ಖದೀಮರು ಸಿಕ್ಕಿಬಿದ್ದಿದ್ದು ಈ ಪ್ರಕರಣ ಶಿರಹಟ್ಟಿ ಪೊಲೀಸ್​​ ಠಾಣೆಯಲ್ಲಿ ದಾಖಲಾಗಿದೆ.