ಅದೃಷ್ಟ ಚೆನ್ನಾಗಿತ್ತು.. ವಿಮಾನದಲ್ಲಿದ್ದ 136 ಪ್ರಯಾಣಿಕರು ಸೇಫ್..!

ತಿರುಚಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ 136 ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ನಿನ್ನೆ ರಾತ್ರಿ 1.20ರ ಸುಮಾರಿಗೆ ತಿರುಚಿಯಿಂದ ದುಬೈಗೆ ಏರ್​​ ಇಂಡಿಯಾ ವಿಮಾನ ಪ್ರಯಾಣ ಬೆಳಸಬೇಕಿತ್ತು. ಆದ್ರೆ,  ಟೇಕಾಫ್ ಆಗುತ್ತಿದ್ದ ವೇಳೆ ವಿಮಾನ ನಿಲ್ದಾಣದ ಕಾಂಪೌಂಡ್​ಗೆ ಡಿಕ್ಕಿ ಹೊಡೆದಿದೆ. ವಿಮಾನದ ಚಕ್ರ ಕಾಂಪೌಂಡ್​ ಗೋಡೆಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಕಾಂಪೌಂಡ್ ಧ್ವಂಸವಾಗಿದೆ. ಜೊತೆಗೆ ವಿಮಾನಕ್ಕೂ ಸಣ್ಣಪುಟ್ಟ ಡ್ಯಾಮೇಜ್ ಆಗಿದೆ. ಕೂಡಲೇ ಆ ವಿಮಾನವನ್ನ ಸುರಕ್ಷಿತವಾಗಿ ಮುಂಬೈಗೆ ಡೈವರ್ಟ್​ ಮಾಡಿ, ಬದಲಿ ವಿಮಾನದ ಮೂಲಕ ಪ್ರಯಾಣಿಕರನ್ನ ದುಬೈಗೆ ಕಳುಹಿಸಿ ಕೊಡಲಾಗಿದೆ ಅಂತಾ ಏರ್ ಇಂಡಿಯಾ ತಿಳಿಸಿದೆ.