ಕುಡಿದ ಮತ್ತಲ್ಲಿ ಬಿರಿಯಾನಿ ಜೊತೆಗೆ ಆ ಭೂಪ ಏನು ತಿಂದ ಗೊತ್ತೇ..!?

ಉಡುಪಿ: ಕುಡಿದ ಮತ್ತಿನಲ್ಲಿ ಗೆಳೆಯನ ಕಿವಿಯನ್ನೇ ಕಚ್ಚಿ ತಿಂದ ವಿಲಕ್ಷಣ ಘಟನೆ ನಗರದ ಕೃಷ್ಣಮಠ ಪರಿಸರದಲ್ಲಿ ನಡೆದಿದೆ.
ಬೆಂಗಳೂರು ಮೂಲದ ಮಧು ಹಾಗೂ ಸುರೇಶ್​ ಎಂಬ ಇಬ್ಬರು ಚಾಲಕರು ಪ್ರವಾಸಿಗರನ್ನು ಉಡುಪಿಗೆ ಕರೆತಂದಿದ್ದರು. ಜೊತೆಯಲ್ಲೇ ಕುಳಿತು ಕುಡಿದು ಬಿರಿಯಾನಿ ತುಂಡಿಗಾಗಿ ಇಬ್ಬರೂ ಪರಸ್ಪರ ಜಗಳವಾಡಿಕೊಂಡಿದ್ದಾರೆ. ಅವರ ಜಗಳ ಕಿವಿ ಕಚ್ಚೋದ್ರೊಂದಿಗೆ ಮುಕ್ತಾಯಗೊಂಡಿದೆ. ಘಟನೆಯಲ್ಲಿ ಮಧು ಎಂಬಾತನ ಕಿವಿ ತುಂಡಾಗಿದ್ದು, ಎಣ್ಣೆ ಅಮಲಿನಲ್ಲಿ ಬಿರಿಯಾನಿ ಜೊತೆ ಕಿವಿಯನ್ನೂ ತಿಂದಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಮಧು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv