ನಿಮಗೆ ಪಾಠ ಬೇಕಾ ಮಕ್ಕಳೇ, ನಂಗೆ ಎಣ್ಣೆ ಬೇಕು ಎಣ್ಣೆ ..!

ಬಳ್ಳಾರಿ: ಶಾಲಾ ಶಿಕ್ಷಕರು ಮಕ್ಕಳ ಪಾಲಿಗೆ ಆದರ್ಶ ವ್ಯಕ್ತಿಗಳಂತಿರಬೇಕು, ಮಾದರಿಯಾಗಿರಬೇಕು. ಆದ್ರೆ ಇಲ್ಲೊಬ್ಬ ಶಿಕ್ಷಕ ತಾನು ಗುಂಡು ಹಾಕದೇ ಶಾಲೆಗೇ ಬರೋಲ್ಲ ಅಂತಾನೆ. ಇಂತಾ ಗುಂಡು ಪ್ರೇಮಿ ಶಿಕ್ಷಕ ಇರೋದು ಬಳ್ಳಾರಿಯ ಸಿರುಗುಪ್ಪ ತಾಲೂಕಿನ ತೊಂಡೆಹಾಳ ರಾಮಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ.
ಶಾಲೆಯ ಮುಖ್ಯ ಶಿಕ್ಷಕ ರಾಜಪ್ಪನೇ ಆ ಮದ್ಯ ಪ್ರಿಯ ಶಿಕ್ಷಕ. ಅವರೇ ಹೆಡ್​ಮಾಸ್ಟರ್​ ಅಂದಮೇಲೆ ಹೇಳೋರೂ ಇಲ್ಲ… ಕೇಳೋರೂ ಇಲ್ಲ… ವಿಶೇಷ ಅಂದ್ರೆ ಈತ ಕುಡಿಯದೇ ಶಾಲೆಗೆ ಬಂದದ್ದನ್ನು ನಾವು ಕಂಡೇ ಇಲ್ಲಾ ಅಂತಾರೆ ಗ್ರಾಮಸ್ಥರು. ಈತನ ಈ ವರ್ತನೆಗೆ ಬೇಸತ್ತ ಗ್ರಾಮಸ್ಥರು ಸಂಬಧಿಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇನ್ನು ಇದನ್ನೆಲ್ಲ ಪರಿಶೀಲಿಸಲು ಬಂದ ಸಿಆರ್​ಪಿ ನಾಗರಾಜ್ ಈತನಿಗೆ ಕೇವಲ ವಾರ್ನ್ ಮಾಡಿ, ಗ್ರಾಮಸ್ಥರಿಂದ ದೂರು ಬರೆಸಿಕೊಂಡಿದ್ದಾರೆ. ಈ ವೇಳೆ ಅಧಿಕಾರಿಯ ಮುಂದೆ ಅಲವತ್ತುಕೊಂಡ ಶಿಕ್ಷಕ ಇನ್ಮುಂದೆ ಯಾವತ್ತೂ ಹೀಗೆ ಮಾಡೋಲ್ಲ ಅಂತಾ ತಪ್ಪೊಪ್ಪಿಕೊಂಡಿದ್ದಾರೆ. ಅಂದ್ರೆ ಇನ್ಮೇಲಾದ್ರೂ ಈ ಹೆಡ್ ಮಾಸ್ಟರ್ ಸುಧಾರಿಸಿಕೊಳ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv