ಆಟೋ ಚಾಲಕರ ‘ಎಣ್ಣೆ ಪಾರ್ಟಿ’.. ರಸ್ತೆಯಲ್ಲಿ ಏನಾಯ್ತು!?

ಚಿತ್ರದುರ್ಗ: ಎಣ್ಣೆ ಪಾರ್ಟಿ ಮಾಡಿದ್ದ ಆಟೋ ಚಾಲಕರು ಹಣದ ವಿಚಾರಕ್ಕಾಗಿ ರಸ್ತೆಯಲ್ಲಿ ಆಟೋ ನಿಲ್ಲಿಸಿ ಜಗಳ ಮಾಡಿಕೊಂಡ ಘಟನೆ ನಗರದ ಮಯೂರ ಬಾರ್​ ಆ್ಯಂಡ್​​ ರೆಸ್ಟೋರೆಂಟ್​​ ಮುಂಭಾಗ ನಡೆದಿದೆ.
ಕುಡಿಯುವ ವೇಳೆ ಒಟ್ಟಿಗೆ ಇದ್ದ ಆಟೋ ಚಾಲಕರು ಪಾರ್ಟಿ ಮುಗಿದ ನಂತರ ಹಣಕಾಸಿನ ವಿಚಾರಕ್ಕೆ ಜಗಳ ಶುರುವಾಗಿದೆ. ಆಟೋ ಚಾಲಕರಾದ ರಂಗಸ್ವಾಮಿ ಹಾಗೂ ಮಂಜುನಾಥ್​​ ಎಂಬುವರ ನಡುವೆ ಗಲಾಟೆ ನಡೆದಿದೆ. ಅಮಲಿನಲ್ಲಿದ್ದ ಮೂವರು ಚಾಲಕರು ಸೇರಿ ರಂಗಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ನು ಆಟೋ ಚಾಲಕರ ಗಲಾಟೆಯನ್ನು ನೋಡಲು ಸಾರ್ವಜನಿಕರು ಸುತ್ತುವರೆದ್ದಿದ್ದರು. ಈ ಕುರಿತು ಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv