ಎಣ್ಣೆ ಏಟಲ್ಲಿ ಜೊತೆಲಿದ್ದ ಸ್ನೇಹಿತನಿಗೆ ಏನ್​ ಮಾಡ್ದಾ ಗೊತ್ತಾ..!?

ಬೆಳಗಾವಿ: ಪರಮಾತ್ಮ ಒಳಗೋದ್ರೆ ಅವನು ಆಡಿಸಿದಂತೆ ಆಡಬೇಕು, ಅಷ್ಟೆ! ಗುಂಡಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ.. ಆಪತ್ತು! ಅನ್ನೋ ದೊಡ್ಡೋರ ಮಾತು ನಿಜ ಎನ್ನುವಂತೆ ಇಲ್ಲೊಬ್ಬ ವರ್ತಿಸಿದ್ದಾನೆ. ಕುಡಿದ ಅಮಲಿನಲ್ಲಿ ತನ್ನ ಸ್ನೇಹಿತನಿಗೇ ಚಾಕು ಇರಿದಿದ್ದಾನೆ. ನಿನ್ನೆ ತಡರಾತ್ರಿ ಗೋಕಾಕ ಪಟ್ಟಣದ ಕ್ರಿಮ್ಸ್ ಕಾರ್ನರ್ ಬಳಿ ಆರೋಪಿ ಸೌರಬ್​ ಪಿಟಗಿ ಕುಡಿದ ಮತ್ತಿನಲ್ಲಿ ತನ್ನ ಸ್ವಂತ ಸ್ನೇಹಿತನಿಗೇ ಚಾಕು ಇರಿದಿದ್ದಾನೆ. ಇನ್ನು ಚಾಕು ಇರಿತಕ್ಕೊಳಗಾದವನನ್ನು ಬಸವರಾಜ್ ಬೋಸಲೆ ಎಂದು ಗುರುತಿಸಲಾಗಿದೆ. ಸದ್ಯ ಗಾಯಾಳು ಬಸವರಾಜ್​ಗೆ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ. ಈ ಸಂಬಂಧ ಗೋಕಾಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv