2021 ರೊಳಗೆ ರಾಜಧಾನಿಗೆ ಚಾಲಕ ರಹಿತ ಮೆಟ್ರೋ..!

ಬೆಂಗಳೂರು: ನಮ್ಮ ಮೆಟ್ರೋಗೆ ತೆಕ್ಕೆಗೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ. 2021 ರೊಳಗೆ ರಾಜಧಾನಿಯಲ್ಲಿ ಚಾಲಕ ರಹಿತ ಮೆಟ್ರೋ ಹಳಿಯ ಮೇಲೆ ಓಡಾಡುವ ಸಾಧ್ಯತೆಯಿದೆ. ಮೆಟ್ರೋ ಎರಡನೇ ಹಂತದ ಯೋಜನೆಯಡಿ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಆರ್​ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಚಾಲಕರಹಿತ ರೈಲು ಕಾರ್ಯಾರಂಭ ಮಾಡಲಿದೆ. ಈಗಾಗಲೇ ಚಾಲಕ ರಹಿತ ರೈಲು ವಿಶ್ವದ ಅನೇಕ ರಾಷ್ಟ್ರಗಳಲ್ಲಿದ್ದು, ಈಗ ಬೆಂಗಳೂರಿಗೂ ಕಾಲಿಡಲಿದೆ. ಅಲ್ಲದೇ ಬಿಎಮ್ಆರ್​ಸಿಎಲ್​ಗೆ ಹೆಚ್ಚಿನ ಅನುದಾನ ಹರಿದು ಬರುತ್ತಿರುವುದರಿಂದ ಚಾಲಕ ರಹಿತ ರೈಲು ಓಡಿಸಲು ನಿರ್ಧರಿಸಲಾಗಿದೆ. ಮೆಟ್ರೋ ಎರಡನೇ ಹಂತದ ಕಾಮಗಾರಿ ನಡೆಯುತ್ತಿದ್ದು 2021 ರ ವೇಳೆಗೆ ಎರಡನೇ ಹಂತದ ಮಾರ್ಗ ನಿರ್ಮಾಣ ಪೂರ್ಣಗೊಳ್ಳಲಿದೆ. ಕಮ್ಯುನಿಕೇಷನ್ ಬೇಸ್ಡ್ ಟ್ರೈನ್ ಕಂಟ್ರೋಲ್ ಸಿಗ್ನಲ್ ಸಿಸ್ಟಮ್ ತಂತ್ರಜ್ಞಾನವನ್ನ ಎರಡನೇ ಹಂತದ ಯೋಜನೆ ವೇಳೆಗೆ ಅಳವಡಿಸಲಾಗುತ್ತಿದೆ. ಇದ್ರಿಂದ ರೈಲನ್ನು ನಿಯಂತ್ರಣಾ ಕೊಠಡಿಯಿಂದಲೇ ನಿರ್ವಹಣೆ ಮಾಡಬಹುದಾಗಿದೆ. ಸದ್ಯ ಮೊದಲನೇ ಹಂತದಲ್ಲಿ ಕಾರ್ಯನಿರ್ವಾಹಿಸುತ್ತಿರುವುದು ಡಿಟಿಜಿ ವ್ಯವಸ್ಥೆ ಮೂಲಕ. ಡಿಟಿಜಿ ತಂತ್ರಜ್ಞಾನದಲ್ಲಿ ಒಂದು ರೈಲಿನಿಂದ ಮತ್ತೊಂದು ರೈಲಿಗೆ ಎರಡೂವರೆ ನಿಮಿಷದ ಅಂತರವಿರುತ್ತದೆ. ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಅಂತರವನ್ನು ಒಂದೂವರೆ ನಿಮಿಷಕ್ಕೆ ಇಳಿಯಲಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv