ಚಳಿಗಾಲದ ಶೀತ, ಜ್ವರಕ್ಕೆ ಈ ಮಿರಾಕಲ್​ ಡ್ರಿಂಕ್​​​ ಸೇವಿಸಿ

ಚಳಿಗಾಲದಲ್ಲಿ ಶೀತ ಕೆಮ್ಮು, ಜ್ವರದಂಥ ಸಮಸ್ಯೆಗಳು ಬರೋದು ಕಾಮನ್​. ವಾತಾವರಣದಲ್ಲಿ ಬದಲಾಗುತ್ತಿರುವ ಹವಾಮಾನ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ. ಇವು ಕೇವಲ ದೈಹಿಕವಾಗಿ ಅಷ್ಟೇ ಅಲ್ಲ ಮಾನಸಿಕವಾಗಿಯೂ ಹಿಂಸೆ ಮಾಡುತ್ತದೆ. ಚಳಿಗಾಲದಲ್ಲಿ ನಮ್ಮ ದೇಹಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಆದ್ದರಿಂದಲೇ ಶೀತ, ಕೆಮ್ಮು, ಜ್ವರದಂತಹ ಕಾಯಿಲೆಗಳು ಬಹಳ ಬೇಗನೇ ಹರಡುತ್ತದೆ. ನೀವು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೆ, ಈ ಸರಳವಾದ ಮನೆಯ ಮದ್ದನ್ನ ಟ್ರೈ ಮಾಡಬಹುದು.

ನಮ್ಮ ಮನೆಯಲ್ಲೇ ಇರುವ ಅಡಿಗೆ ಮನೆ ಒಂದು ರೀತಿಯ ಮೆಡಿಕಲ್​ ಶಾಪ್​ ಇದ್ದ ಹಾಗೆ. ಯಾಕಂದ್ರೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಅಲ್ಲೇ ಪರಿಹಾರ ಸಿಗುತ್ತೆ. ಅಡಿಗೆ ಮನೆಯಲ್ಲಿರುವ ಶುಂಠಿ ಎಂಬ ಮಿರಾಕಲ್​ ಔಷಧಿ ಕೆಮ್ಮು, ಜ್ವರ ಮತ್ತು ಶೀತಕ್ಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಶುಂಠಿ ಜೊತೆಗೆ , ಪುದೀನ, ನಿಂಬೆ, ಜೇನುತುಪ್ಪ ಸೇರಿಸಿದ್ರಂತೂ ಶೀತ, ಕೆಮ್ಮು, ಜ್ವರ ನಿಮ್ಮನ್ನ ಬಿಟ್ಟು ದೂರ ಓಡಿ ಹೋಗುತ್ತೆ.

ಡಿಕೆ ಪಬ್ಲಿಷಿಂಗ್ ಹೌಸ್​ನ “ಹೀಲಿಂಗ್ ಫುಡ್ಸ್” ಎಂಬ ಪುಸ್ತಕದ ಪ್ರಕಾರ, “ನಿಂಬೆ ರಸ, ಪುದೀನ ಮತ್ತು ಶುಂಠಿ ರೋಗದ ಲಕ್ಷಣಗಳನ್ನು ಎದುರಿಸಲು ಸಹಾಯ ಮಾಡುವ ಪರಿಪೂರ್ಣ ಔಷಧಿಯಾಗಿದೆ. ತಾಜಾ ಶುಂಠಿಯ ತೆಳ್ಳಗಿನ ಚರ್ಮ ಮತ್ತು ನಾರಿನ ಮೂಲವು ಆ್ಯಂಟಿ ಇನ್ ​ಫ್ಲಾಮೇಟರಿ ಗುಣಗಳನ್ನು ಹೊಂದಿರುತ್ತದೆ. ಇದು ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಇನ್ನು, ಜೇನುತುಪ್ಪ ನೈಸರ್ಗಿಕ ಆ್ಯಂಟಿ ಬಯೋಟಿಕ್​ ಅಂಶವಿದೆ, ನಿಂಬೆ ಮತ್ತು ಪುದೀನದಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್​ ಗುಣಲಕ್ಷಣಗಳಿದ್ದು, ಶೀತವನ್ನ ಬೇಗನೇ ವಾಸಿಮಾಡುತ್ತದೆ.

ಶುಂಠಿ ಟೀಗೆ ಬೇಕಾಗಿರುವ ಪದಾರ್ಥಗಳು
ತಾಜಾ ಶುಂಠಿ, ನಿಂಬೆ -1 ನಿಂಬೆ ಹಣ್ಣು, ಒಂದು ಟೇಬಲ್​ ಸ್ಪೂನ್​ ಕತ್ತರಿಸಿದ ಪುದೀನ ಎಲೆಗಳು, ಜೇನು ತುಪ್ಪ 1/2 ಸ್ಪೂನ್​

ಟೀ ತಯಾರಿಸಲು ಹೀಗೆ ಮಾಡಿ:
ಶುಂಠಿಯನ್ನ ಚೆನ್ನಾಗಿ ತೊಳೆದು 10ರಿಂದ 15 ನಿಮಿಷ ನೆನೆಸಿ. ನಂತರ 2 ಕಪ್​ ನೀರು ಹಾಕಿ ಚೆನ್ನಾಗಿ ಕುದಿಸಿ. ನಂತರ ಮತ್ತೆ ಜೇನುತುಪ್ಪ, ನಿಂಬೆ ರಸ, ಪುದೀನ ಎಲೆಗಳನ್ನ ಸೇರಿಸಿ ಕಡಿಮೆ ಉರಿಯಲ್ಲಿ 2 ರಿಂದ 3 ನಿಮಿಷ ಕಡಿಮೆ ಕುದಿಸಿ ತಣ್ಣಗಾಗಲು ಬಿಡಿ. ಈ ಟೀಯನ್ನ ದಿನಕ್ಕೆ 2 ಬಾರಿ ಸೇವಿಸಿದ್ರೆ ಶೀತ ಕೆಮ್ಮು ಮಂಗಮಾಯವಾಗುತ್ತದೆ.