ಹೆಲ್ತ್, ಫಿಗರ್, ಅಟ್ರಾಕ್ಷನ್ ಬೇಕಾ? ಹಾಗಿದ್ರೆ ಇದನ್ನ ನೀವು ಕುಡಿಯಲೇ ಬೇಕು..!

ಹಣ್ಣು ಮತ್ತು ತರಕಾರಿಗಳು ಜಗತ್ತಿಗೆ ನಿಸರ್ಗ ನೀಡಿರೊ ಬಹು ದೊಡ್ಡ ಕೊಡುಗೆಗಳು. ರುಚಿ ಮತ್ತು ಪೌಷ್ಠಿಕಾಂಶಕ್ಕೆ ಹಣ್ಣು ಹಾಗೂ ತರಕಾರಿಗಳು ತುಂಬಾ ಮುಖ್ಯ. ಅದ್ರಲ್ಲೂ ಸೀಸನ್ಡ್ ಫ್ರೂಟ್ ಹಾಗೂ ತರಕಾರಿಗಳಂತೂ ಮನುಷ್ಯನ ಆರೋಗ್ಯ ಹೆಚ್ಚಿಸಲು ಬಹಳ ಸಹಕಾರಿ. ಹಾಗಂತ ತರಕಾರಿಗಳನ್ನು ಹಸಿಯಾಗಿ ಅಥವಾ ಬೇಯಿಸಿ ಸೇವಿಸೋದ್ರಿಂದ ಎಲ್ಲಾ ಪೌಷ್ಠಿಕಾಂಶಗಳು ನೇರವಾಗಿ ದೇಹಕ್ಕೆ ಸೇರುವುದಿಲ್ಲ. ಇದ್ರಲ್ಲಿ ವೇಸ್ಟೇಜ್​ ಜಾಸ್ತಿ ಆಗುತ್ತೆ. ಆದ್ರಿಂದ ತರಕಾರಿ ಹಾಗೂ ಹಣ್ಣಿನ ಜ್ಯೂಸ್ ಮಾಡಿ ಕುಡಿಯೋದು ಅತ್ಯಂತ ಲಾಭದಾಯಕ. ಜ್ಯೂಸ್ ರೂಪದಲ್ಲಿ ಸೇವಿಸುವುದರಿಂದ ಏನೆಲ್ಲಾ ಉಪಯೋಗಗಳಿವೆ ಗೊತ್ತಾ? ಇಲ್ಲಿದೆ ನೋಡಿ ಡಿಟೇಲ್ಸ್.

1. ಹೆಚ್ಚಿನ ಪೌಷ್ಟಿಕಾಂಶ
ವಿವಿಧ ರೀತಿಯ ತರಕಾರಿಗಳನ್ನು ತಿನ್ನುವ ಬದಲು ಜ್ಯೂಸ್ ಮಾಡಿ ಕುಡಿಯುವುದು ದೇಹಕ್ಕೆ ಹಾಗೂ ಆರೋಗ್ಯಕ್ಕೆ ತುಂಬಾ ಸಹಾಯಕಾರಿ. ಅಂದರೆ ತರಕಾರಿಯ ಜ್ಯೂಸ್​ ಅನ್ನು ತಯಾರಿಸಿ ಕುಡಿಯುವುದರಿಂದ ದೇಹದ ಎಲ್ಲಾ ಭಾಗಗಳೂ ಕೂಡ ತರಕಾರಿಯ ರಸದಲ್ಲಿರುವ ಪೌಷ್ಟಿಕಾಂಶವನ್ನು ಹೀರಿಕೊಳ್ಳುತ್ತವೆ. ಕೇವಲ ತರಕಾರಿ ಸೇವಿಸುವುದಕ್ಕಿಂತ ತರಕಾರಿಯನ್ನು ಜ್ಯೂಸ್​ ಮಾಡಿ ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ಪೌಷ್ಟಿಕಾಂಶತೆ ದೊರೆಯುತ್ತದೆ ಅಂತಾರೆ ವೈದ್ಯರು.

2. ನಿಮ್ಮ ದೇಹವನ್ನು ಹೆಚ್ಚು ಆ್ಯಕ್ಟಿವ್​ ಆಗಿರಿಸುತ್ತೆ
ನಿಮ್ಮ ದೇಹವನ್ನು ಹೆಚ್ಚು ಆ್ಯಕ್ಟಿವ್​ ಆಗಿಡಲು ನೈಸರ್ಗಿಕ ತರಕಾರಿಯ ಜ್ಯೂಸನ್ನು ಬೆಳಗ್ಗೆ ತಿಂಡಿಯೊಂದಿಗೆ ಸೇವಿಸಬೇಕು. ಮತ್ತು ರಾತ್ರಿ ಊಟಕ್ಕೂ ಮುನ್ನ ಸೇವಿಸಬೇಕು. ಇದ್ರಿಂದ ನಿಮ್ಮ ದೇಹ ಆ್ಯಕ್ಟಿವ್​ ಆಗಿರುವುದಲ್ಲದೆ ಸದಾ ಯೌವನದಿಂದರಿಲು ಸಹಾಯಕವಾಗಿರುತ್ತದೆ.

3. ಕೂದಲಿನ ಬೆಳವಣಿಗೆಗೆ ಸಹಕಾರಿ
ತರಕಾರಿಯ ಜ್ಯೂಸನ್ನು ಕುಡಿಯುವುದರಿಂದ ನಿಮ್ಮ ಕೂದಲಿನ ಬೆಳವಣಿಗೆ ಚೆನ್ನಾಗಿರುತ್ತದೆ. ತರಕಾರಿಗಳಲ್ಲಿ ಮುಖ್ಯವಾಗಿ ಕ್ಯಾರೇಟ್​, ಬೀಟ್ರೋಟ್​, ಪಾಲಕ್​ ಸೊಪ್ಪು ಹಾಗೂ ಈರುಳ್ಳಿಯನ್ನು ಹೆಚ್ಚು ಸೇವಿಸೋದ್ರಿಂದ ಕೂದಲಿನ ಬೆಳವಣಿಗೆಯ ಜೊತೆಗೆ ಸಾಫ್ಟ್​ ಆಂಡ್​ ಸಿಲ್ಕಿ ಕೂದಲನ್ನು ಪಡೆಯಬಹುದು. ಈ ತರಕಾರಿಯ ಜ್ಯೂಸನ್ನು ದಿನಕ್ಕೆ 2 ಬಾರಿ ಸೇವಿಸೋದ್ರಿಂದ ಬೆಸ್ಟ್​ ರಿಸಲ್ಟ್​ ದೊರೆಯುತ್ತದೆ.

4. ಮೊಡವೆಯನ್ನು ಗುಣಪಡಿಸುತ್ತದೆ.
ನಿಮ್ಮ ಚರ್ಮದ ಮೈಕಾಂತಿಗಾಗಿ ಉತ್ತಮ ತರಕಾರಿಗಳಾದ ಕುಂಬಳಕಾಯಿ, ಆಲೂಗಡ್ಡೆ ಹಾಗೂ ಕ್ಯಾರೇಟ್​​ಗಳನ್ನು ಸೇವಿಸಬೇಕು. ಇದು ನಿಮ್ಮ ಸ್ಕಿನ್​ಗೆ ಗ್ಲೋ ನೀಡುವುದಲ್ಲದೇ, ಮುಖದ ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ಕಿತ್ತಳೆ ಹಣ್ಣಿನ ರಸವನ್ನು ಸೇವಿಸುವುದರಿಂದ ಅಲರ್ಜಿ ನಿವಾರಕ ಅಂಶಗಳು ಹಾಗೂ ವಿಟಮಿನ್​ ಸಿ ಇರೋದ್ರಿಂದ ಇದು ಮೊಡವೆಗಳು ಮೂಡದಂತೆ ಕಾಪಾಡಿಕೊಳ್ಳುವುದಲ್ಲದೆ, ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

5. ಗ್ಲೋಯಿಂಗ್​ ಸ್ಕಿನ್​
ನೈಸರ್ಗಿಕ ತರಕಾರಿಗಳಾದ ಟೊಮೊಟೊ, ಕ್ಯಾರೆಟ್​, ಎಲೆಕೋಸುಗಳನ್ನು ಜ್ಯೂಸ್​ ಮಾಡಿ ಸೇವಿಸೋದ್ರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ.

ವಿಶೇಷ ಬರಹ: ಚಂದನ ಶ್ಯಾಂ