ಪೇದೆಗೆ ಬಿಯರ್​ ಬಾಟಲ್​ನಿಂದ ಹಲ್ಲೆ, ಆರೋಪಿಗಳು ಅಂದರ್​

ಬೆಂಗಳೂರು: ತಡರಾತ್ರಿ ರಸ್ತೆ ಮಧ್ಯೆ ಕುಡಿದು ಪುಂಡಾಟ ಮೆರೆಯುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಪೇದೆಯ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನ ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ಗೌತಮ್ ರೆಡ್ಡಿ, ಪ್ರಶಾಂತ್​, ಗುರುಪ್ರಸಾದ್ ಹಾಗೂ ಸೂರ್ಯ ಪ್ರಕಾಶ್ ಬಂಧಿತ ಆರೋಪಿಗಳು.
ನಿನ್ನೆ ರಾತ್ರಿ ಕಂದಹಳ್ಳಿ ಗೇಟ್ ಬಳಿ ಕಂಠಪೂರ್ತಿ ಕುಡಿದು, ರಸ್ತೆ ಮಧ್ಯೆ ಕಾರ್ ಪಾರ್ಕ್‌ ಮಾಡಿ, ಮ್ಯೂಸಿಕ್ ಹಾಕಿ, ವಾಹನ ಸವಾರರಿಗೆ ತೊಂದರೆ ನೀಡ್ತಿದ್ರು. ಈ ವೇಳೆ ಗಸ್ತಿನಲ್ಲಿದ್ದ ಹೆಚ್ಎಎಲ್ ಠಾಣೆಯ ಮುಖ್ಯಪೇದೆ ಸುಂದರ್ ರಾಜ್ ಆರೋಪಿಗಳನ್ನ ಪ್ರಶ್ನಿಸಿದ್ದಾರೆ. ಅದಕ್ಕೆ ರೊಚ್ಚಿಗೆದ್ದ ಆರೋಪಿಗಳು ಬಿಯರ್ ಬಾಟಲ್​ನಿಂದ ಹಲ್ಲೆ ನಡೆಸಿದ್ದಾರೆ.
ಕೂಡಲೇ ಹೊಯ್ಸಳ ಸಿಬ್ಬಂದಿ ಗೌತಮ್ ಹಾಗೂ ಪ್ರಶಾಂತ್​ನನ್ನು ಬಂಧಿಸಿದ್ದಾರೆ. ನಂತರ ಕಾರಿನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಮತ್ತಿಬ್ಬರು ಆರೋಪಿಗಳಾದ ಗುರುಪ್ರಸಾದ್ ಹಾಗೂ ಸೂರ್ಯಪ್ರಕಾಶ್ ನನ್ನೂ ಇಂದು ಬೆಳಿಗ್ಗೆ ಬಂಧಿಸಲಾಗಿದೆ. ಇನ್ನು, ಹಲ್ಲೆಗೊಳಗಾದ ಮುಖ್ಯಪೇದೆ ಸುಂದರ್ ​ರಾಜ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv