ರಕ್ತದಲ್ಲಿ ಹುತಾತ್ಮ ಯೋಧ ಗುರು ಭಾವಚಿತ್ರ ಬಿಡಿಸಿ ಶ್ರದ್ಧಾಂಜಲಿ..!

ಬಾಗಲಕೋಟೆ: ಉಗ್ರರ ದಾಳಿಯಲ್ಲಿ ವೀರ ಮರಣ  ಹೊಂದಿದ ಹುತಾತ್ಮ ಯೋಧ ಗುರು ಅವರ ಭಾವಚಿತ್ರವನ್ನು ರಕ್ತದಲ್ಲಿ ಬಿಡಿಸುವುದರ ಮೂಲಕ ಕಲಾವಿದರೊಬ್ಬರು ವಿಶಿಷ್ಟವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಜಮಖಂಡಿ ನಗರದ ಸಂಗಮೇಶ ಬಗಲಿ ಚಿತ್ರ ಬಿಡಿಸಿದ ಕಲಾವಿದ. ಈ ಹಿಂದೆ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದಾಗಲೂ ಅವರು ರಕ್ತದಲ್ಲೇ ಚಿತ್ರ ಬಿಡಿಸಿದ್ದರು. ಇದೀಗ ಸಿಆರ್‌ಪಿಎಫ್ ಯೋಧ ಗುರು ಭಾವಚಿತ್ರ ಬಿಡಿಸಿ, ದಾಳಿಯಲ್ಲಿ ವೀರಮರಣ ಹೊಂದಿದ ಎಲ್ಲ ಯೋಧರಿಗೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv