ಅಣ್ಣಾವ್ರ ಆದರ್ಶಗಳೇ ನಮಗೆ ಸ್ಫೂರ್ತಿ: ದರ್ಶನ್

ಇಂದು ವರನಟ ಡಾ.ರಾಜ್​ಕುಮಾರ್​ರವರ 91 ನೇ ವರ್ಷದ ಹುಟ್ಟು ಹಬ್ಬ. ಕನ್ನಡ ಸಿನಿರಂಗವನ್ನು ಶ್ರೀಮಂತಗೊಳಿಸಿ ಧ್ರುವ ತಾರೆಯಾಗಿ ಮಿಂಚಿದ್ದ ಮೇರುನಟನ ಹುಟ್ಟುಹಬ್ಬವನ್ನು ಕೋಟ್ಯಂತರ ಅಭಿಮಾನಿಗಳು ಸಂಭ್ರಮದಿಂದ ಆಚರಣೆ ಮಾಡ್ತಿದ್ದಾರೆ. ಇನ್ನೊಂದೆಡೆ ಮೆಚ್ಚಿನ ನಟನನ್ನು ಸ್ಮರಿಸಿ ಸಿನಿಗಣ್ಯರಿಂದ ಶುಭಾಷಯಗಳ ಮಹಾಪೂರವೇ ಹರಿದು ಬರ್ತಿದೆ. ಇದೀಗ ಅಣ್ಣಾವ್ರರನ್ನು ನೆನೆದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮೂಲಕ ಸ್ಮರಿಸಿದ್ದಾರೆ. ನಲ್ಮೆಯ ಅಣ್ಣಾವ್ರು, ನಟಸಾರ್ವಭೌಮ ಡಾ.ರಾಜಣ್ಣ ನವರಿಗೆ ಹುಟ್ಟುಹಬ್ಬದ ದಿನದಂದು ಹೃದಯಪೂರ್ವಕ ನಮನಗಳು. ಅವರ ಚಿತ್ರಗಳು ಹಾಗೂ ನಡೆದು ಬಂದ ದಾರಿಯೇ ನಮಗೆ ಆದರ್ಶ, ಸ್ಫೂರ್ತಿದಾಯಕ ಅಂತಾ ಶುಭಕೋರಿದ್ದಾರೆ.