ಜೋಡಿ ಕೊಲೆ ಪ್ರಕರಣ: 8 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ರಾಯಚೂರು: ಮಾನ್ವಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಜನವರಿ 10, 2014 ರಂದು ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಿಲ್ಲಾ ಎರಡನೇ ಜೆಎಂಎಫ್​ಸಿ ಕೋರ್ಟ್ 8 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಐದು ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆಸಿದ ರಾಯಚೂರು ಎರಡನೇ ಜೆಎಂಎಫ್​ಸಿ ಕೋರ್ಟ್ ಈ ವಿಶೇಷ ತೀರ್ಪು ಪ್ರಕಟಿಸಿದೆ. ಬೊಮ್ಮನಾಳ ಗ್ರಾಮದಲ್ಲಿರುವ ಸರ್ಕಾರಿ ಗೋಮಾಳ ಜಾಗದ ವಿಚಾರವಾಗಿ ಎರಡು ಗುಂಪುಗಳ ನಡುವೆ ಕಲಹವಾಗಿತ್ತು. ಕಲ್ಲು, ಕಟ್ಟಿಗೆಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ರು. ಘಟನೆಯಲ್ಲಿ ಗ್ರಾಮದ ಅಶೋಕ ಹಾಗೂ ಶಂಕರಪ್ಪಗೌಡ ಎಂಬವರ ಕೊಲೆ ಮಾಡಿ, ನಾಲ್ವರನ್ನು ತೀವ್ರವಾಗಿ ಗಾಯಗೊಳಿಸಿದ್ದರು. ಈ ವಿಚಾರವಾಗಿ ವಿಚಾರಣೆ ನಡೆಸಿದೆ ನ್ಯಾಯಾಲಯ ಇಂದು ಈ ತೀರ್ಪು ಪ್ರಕಟಿಸಿದೆ. ಎಂಟು ಜನರಿಗೆ ಜೀವಾವಧಿ, ಎಂಟು ಜನರಿಗೆ 10 ವರ್ಷ ಜೈಲು, ಮತ್ತು ಓರ್ವ ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಜೊತೆಗೆ 16 ಜನ ಆರೋಪಿಗಳಿಗೆ 3 ಲಕ್ಷದ 16 ಸಾವಿರ ರೂಪಾಯಿ ದಂಡ ವಿಧಿಸಿದೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು  ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv