ಗರ್ಲ್‌ಫ್ರೆಂಡ್​ ಸಿಗ್ತಿಲ್ಲ, ಸಿಕ್ರೂ ಜೊತೆಗೆ ಇರಲ್ಲ ಅಂತೀರಾ? ಇದೆ, ಇಲ್ಲೊಂದು ಸಮಸ್ಯೆ ಇದೆ..!

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಬ್ಬ ಒಳ್ಳೆ ಸಂಗಾತಿಯ ಅವಶ್ಯಕತೆ ಇದ್ದೇ ಇರುತ್ತೆ. ತನ್ನ ಸುಖ ದುಖಃ ಹಂಚಿಕೊಳ್ಳೊಕೆ, ಸದಾ ಕಾಲ ಸಂಗಾತಿಯೊಂದಿಗೆ ಆನಂದದ ಕಡಲಲ್ಲಿ ತೇಲಾಡೊಕೆ. ಆದರೆ ನಿಜವಾದ ಪ್ರೀತಿ ಅನ್ನೋದು ಅದೃಷ್ಟ ಮಾಡಿರೋರಿಗೆ ಮಾತ್ರ ಸಿಗತ್ತೆ ಅಂತಾರೆ. ಆದರೆ ಅದೃಷ್ಟವನ್ನು ಹೊರತುಪಡಿಸಿ ಈ ಕಾರಣಗಳಿಂದ ನೀವು ಇನ್ನ ಸಿಂಗಲ್​ ಆಗಿ ಇರ ಬಹುದು. ಹಾಗಿದ್ರೆ ಆ ಕಾರಣಗಳು ಯಾವುದು ಅನ್ನೋದನ್ನ ನೀವೇ ನೋಡಿ.

1. ಸ್ವಲ್ಪ ಟೈಮ್‌ ಕೊಡ್ರಿ..!
ಪ್ರೀತಿ ಸಾಮಿಪ್ಯವನ್ನ ಬಯಸುತ್ತೆ, ಪ್ರೀತಿ ಸಮಯವನ್ನ ಬಯಸುತ್ತೆ, ಪ್ರೀತಿ ಸಮರ್ಪಣೆಯನ್ನ ಬಯಸುತ್ತೆ. ಆದರೆ ನಿಮಗೆ ನಿಮ್ಮ ಸಂಗಾತಿಗೆ ಸಮಯ ಕೊಡಲು ಆಗದೆ ಇದ್ರೆ ಮಾತ್ರ ಕಷ್ಟ. ಗರ್ಲ್‌ಫ್ರೆಂಡ್​ ಏನೋ ಸಿಗಬಹುದು. ಆದರೆ ಆ ಸಂಬಂಧಗಳು ತುಂಬಾ ದಿನ ಉಳಿಯುವುದು ಕಷ್ಟ ಸಾಧ್ಯ. ಪ್ರೀತಿಯಲ್ಲಿ ಇಬ್ಬರ ವಿಚಾರಗಳು ಹಾಗೂ ಇಷ್ಟಗಳು ಪ್ರಮುಖ ಪಾತ್ರವಹಿಸುತ್ವೆ.

2. ಒಂಟಿಯಾಗಿರೋದನ್ನ ಬಿಟ್ಬಿಡಿ..!
ಮನುಷ್ಯನಿಗೆ ಒಂಟಿತನ ಅಂದ್ರೆ ಭಯ. ಆದರೆ ಒಂದು ಸಲ ಈ ಒಂಟಿತನವನ್ನ ಇಷ್ಟಪಡಲು ಶುರು ಮಾಡಿದ್ರೆ ಸಾಕು, ಇನ್ಯಾರ ಅವಶ್ಯಕತೆಯೂ ಆತನಿಗೆ ಬೇಕಾಗದಿರಬಹುದು. ಇಂತಹ ಮನಸ್ಥಿತಿಯುಳ್ಳವರು ಗರ್ಲ್‌ಫ್ರೆಂಡ್ ಮಾಡಿಕೊಂಡು ಕಷ್ಟ ಅನುಭವಿಸಲೂಬಹುದು. ಯಾಕಂದ್ರೆ ಸದಾ ಒಂಟಿತನವನ್ನ ಇಷ್ಟ ಪಡುವ ಅವರು ತಮ್ಮ ಪರ್ಸನಲ್ ಲೈಫ್ ಅಲ್ಲಿ ತನ್ನ ಗರ್ಲ್‌ಫ್ರೆಂಡ್​ ಕೂಡ ಇಂಟರ್‌ಫಿಯರ್‌​ ಆಗುವುದನ್ನು ಇಷ್ಟಪಡಲ್ಲ.

3. ಸದಾ ಗೊಂದಲದಲ್ಲಿ ಇರಬೇಡಿ
ಒಂದು ವೇಳೆ ಜೀವನದಲ್ಲಿ ನಿಮಗೆ ನಿರ್ಧಿಷ್ಠವಾದ ಗುರಿ ಇಲ್ಲದಿದ್ದರೆ, ನೀವು ಪ್ರತಿಯೊಂದಕ್ಕೂ ಆಕರ್ಷಿತರಾಗಿ ತೀವ್ರ ಗೊಂದಲಕ್ಕೀಡಾಗುತ್ತೀರಿ. ಆಗ ನೀವು ಸದಾ ಕಿರಿಕಿರಿ ಅನುಭವಿಸುತ್ತೀರುತ್ತೀರಿ. ಈ ರೀತಿ ಸದಾ ಕಿರಿಕಿರಿ ಮಾಡಿಕೊಳ್ಳುವ ಹಾಗೂ ಗೊಂದಲದಲ್ಲಿರುವ ವ್ಯಕ್ತಿಯ ಜೊತೆ ಯಾರೂ ಇರಲು ಇಷ್ಟ ಪಡುವುದಿಲ್ಲ.

4. ಹಳೇ ನೆನಪೇ ಸಾಕು ಬ್ರೇಕಪ್‌ಗೆ..!
ನೀವು ಇನ್ನೂ ನಿಮ್ಮ ಹಳೆ ಗರ್ಲ್‌ಫ್ರೆಂಡ್​ ನೆನಪಿನಲ್ಲೇ ಇದ್ದರೆ, ಸದಾ ಅವಳ ಬಗ್ಗೆಯೇ ಚಿಂತಿಸುತ್ತಾ ಇದ್ದರೆ, ಅವಳ ನೆನೆಪನ್ನ ಪದೇ ಪದೇ ಮೆಲಕು ಹಾಕುತ್ತಿದ್ದರೆ, ನಿಮ್ಮ ಹೊಸ ಗೆಳತಿ ಇದರಿಂದ ತೀವ್ರ ಕಿರಿಕಿರಿ ಅನುಭವಿಸುವಳು ಹಾಗೂ ನಿಮ್ಮ ಪ್ರೀತಿಯನ್ನು ಅವಳು ಶಂಕಿಸಲು ಶುರುಮಾಡುವಳು. ಹೀಗೆ ಈ ಸಂಬಂಧ ಕೂಡ ಕಳಚಿ ಬೀಳುವ ಪ್ರಮೇಯ ಹೆಚ್ಚಾಗುತ್ತೆ.

5. ಸ್ಮಾರ್ಟ್‌, ಕಾನ್ಫಿಡೆಂಟಾಗಿರಿ..!
ಸಾಮಾನ್ಯವಾಗಿ ಹುಡುಗಿಯರು ತುಂಬ ಕಾನ್ಫಿಡೆಂಟಾಗಿರುವ ಹಾಗೂ ಸ್ಮಾರ್ಟ್‌ ಆಗಿರುವ ಹುಡುಗರನ್ನ ಇಷ್ಟ ಪಡುತ್ತಾರೆ. ಒಂದು ವೇಳೆ ನಿಮ್ಮಲ್ಲಿ ಆ ಕಾನ್ಫಿಡನ್ಸ್​ನ ಕೊರತೆ ಇದ್ದರೆ ಖಂಡಿತ ಹುಡುಗಿಯರು ನಿಮ್ಮೊಂದಿಗೆ ಇರಲು ಇಷ್ಟಪಡುವುದಿಲ್ಲ.

6. ಗರ್ಲ್‌ಫ್ರೆಂಡ್‌ನ ಟೀಕಿಸಬೇಡಿ ಹುಷಾರು..!
ಒಂದು ವೇಳೆ ನಿಮಗೆ ಬೇರೆಯವರನ್ನು ಸದಾ ಕಾಲೆಳೆಯುವ ಟೀಕಿಸುವ ಅವಮಾನಿಸುವ ಗುಣಗಳೇನಾದ್ರು ಇದ್ರೆ ಬಾಸ್​ ಈಗಲೇ ಸುಧಾರಿಸಿಕೊಳ್ಳಿ. ಇಂಥ ವ್ಯಕ್ತಿತ್ವದ ಹುಡುಗರನ್ನ ಹುಡುಗೀರು ದ್ವೇಷಿಸುತ್ತಾರೆ.

ವಿಶೇಷ ಬರಹ – ಅನುಜಾ