ಚುನಾವಣೆಯಲ್ಲಿ ನನ್ನಿಂದ ಪವಾಡ ನಿರೀಕ್ಷಿಸಬೇಡಿ-ಪ್ರಿಯಾಂಕ ಗಾಂಧಿ

ನವದೆಹಲಿ: ಲೋಕಸಭೆ ಚುನಾವಣೆಯ ಕಾವು ಹೆಚ್ಚಾಗ್ತಿದೆ. ಚುನಾವಣೆ ಬೆನ್ನಲ್ಲೇ ಜೂನಿಯರ್ ಇಂದಿರಾ ಗಾಂಧಿ ಅಂತಲೇ ಕರೆಸಿಕೊಳ್ಳುವ ಪ್ರಿಯಾಂಕ ಗಾಂಧಿ ರಾಜಕೀಯ ಅಖಾಡಕ್ಕೆ ಧುಮುಕಿರೋದು ಕಾಂಗ್ರೆಸ್​ ಪಾಳಯದ ಜೋಶ್​ ಡಬಲ್​ ಮಾಡಿದೆ. ಪ್ರಿಯಾಂಕಾ ಗಾಂಧಿ ಲೋಕಸಭೆ ಚುನಾವಣೆಗಾಗಿ ವ್ಯೂಹಗಳನ್ನು ರಚಿಸುತ್ತಿರುವ ಬೆನ್ನಲ್ಲೇ ಕೈ ಕಾರ್ಯಕರ್ತರ ಗೆಲುವಿನ ಆಸೆಗಳು ದುಪ್ಪಟ್ಟಾಗಿದೆ. ಆದ್ರೆ, ವಾಸ್ತವವನ್ನು ಅರಿತಿರುವ ಪ್ರಿಯಾಂಕ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರಿಗೆ ಪಾಠ ಮಾಡಿದ್ದಾರೆ. ನನ್ನಿಂದ ಚಮತ್ಕಾರವನ್ನು ನಿರೀಕ್ಷಿಸಬೇಡಿ. ಬೂತ್​ ಮಟ್ಟದಿಂದ ಪಕ್ಷವನ್ನು ಬಲಪಡಿಸಿ ಎಂದು ಸಲಹೆ ನೀಡಿದ್ದಾರೆ. ಬೂತ್​ ಮಟ್ಟದಿಂದ ಪಕ್ಷವನ್ನು ಸಂಘಟಿಸಿದರೆ ಮಾತ್ರ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಬಲಗೊಳ್ಳಲಿದೆ. ನನ್ನೊಬ್ಬಳಿಂದಲೇ ಏನೂ ಆಗಲ್ಲ ಅಂತಾ ಕಡ್ಡಿಮುರಿದಂತೆ ಹೇಳಿದ್ದಾರೆ.

Follow us on:
YouTube: firstNewsKannada Instagram: firstnews.tv Face Book: firstnews.tv Twitter: firstnews.tv