ಈ ಎಮೋಷನಲ್​ ಸ್ಟೋರಿ ನಿಜ ಅಂತ ನಂಬಬೇಡಿ..!

ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಹಲವಾರು ಫೋಟೋ, ವಿಡಿಯೋಗಳು ವೈರಲ್ ಆಗುತ್ತವೆ. ಜನ ಆ ಪೋಸ್ಟ್​​ಗಳನ್ನ ಮೆಚ್ಚಿ ಅಥವಾ ಎಮೋಷನಲ್​ ಕಥೆಗೆ ಕರಗಿ ತಾವೂ ಕೂಡ ಶೇರ್​ ಮಾಡ್ತಾರೆ. ಆದ್ರೆ ಇಂಥ ಎಷ್ಟೋ ಪೋಸ್ಟ್​​ಗಳ ಹಿಂದಿನ ಸ್ಟೋರಿ ನಿಜವೋ ಸುಳ್ಳೋ ಅಂತ ಚೆಕ್​ ಮಾಡೋಕೆ ಹೋಗೋದಿಲ್ಲ. ಕೆಲವೊಮ್ಮೆ ಸುಳ್ಳು ಪೋಸ್ಟ್​​ಗಳು ನಿಮ್ಮನ್ನ ಯಾಮಾರಿಸಬಹುದು. ಅದಕ್ಕೆ ಉದಾಹರಣೆ ಈ ಸ್ಟೋರಿ.

ವಯಸ್ಸಾದ ವ್ಯಕ್ತಿಯೊಬ್ಬರು ರಿಕ್ಷಾ ಬಂಡಿಯಲ್ಲಿ ಕುಳಿತಿದ್ದು, ಆ ಬಂಡಿಯನ್ನು ಯುವತಿಯೊಬ್ಬಳು ಎಳೆದೊಯ್ಯುತ್ತಿರೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಪ್ರಾಬ್ಲಮ್​ ಇರೋದು ಈ ಫೋಟೋದಲ್ಲಲ್ಲ, ಆದ್ರೆ ಅದರ ಜೊತೆಯಲ್ಲಿ ಬರೆದಿರೋ ಎಮೋಷನಲ್​​ ಸ್ಟೋರಿಯಲ್ಲಿ. “ರಿಕ್ಷಾ ಬಂಡಿಯನ್ನು ಎಳೆಯುತ್ತಿರೊ ಯುವತಿ ಐಎಎಸ್​ ಟಾಪರ್​, ಆಕೆ ತನ್ನ ತಂದೆಯನ್ನು ಜನರಿಗೆ ಪರಿಚಯಿಸುತ್ತಿದ್ದಾಳೆ. ಆಕೆಗೆ ಹಾಗೂ ಆಕೆಯ ತಂದೆಗೆ ಒಂದು ದೊಡ್ಡ ಸಲ್ಯೂಟ್​”  ಅಂತ ಫೋಟೋ ಜೊತೆ ಪೋಸ್ಟ್​ ಹಾಕಲಾಗಿತ್ತು. ಸಿಲ್ಚರ್​​ ಡೈರಿ ಅನ್ನೋ ಫೇಸ್​​ಬುಕ್​ ಪೇಜ್​ನಲ್ಲಿ ಈ ಫೋಟೋ ಶೇರ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. 32 ಸಾವಿರಕ್ಕೂ ಹೆಚ್ಚು ಬಾರಿ ಈ ಪೋಸ್ಟ್​​ ಶೇರ್​ ಆಗಿದೆ. ಅಷ್ಟೇ ಅಲ್ಲ, ಕಾಂಗ್ರೆಸ್​​ ಮುಖಂಡ, ಮಾಜಿ ಕೇಂದ್ರ ಸಚಿವ ಶಶಿ ತರೂರ್​ ಕೂಡ ಈ ಫೋಟೋವನ್ನು ಟ್ವಿಟರ್​​ನಲ್ಲಿ ಶೇರ್​​ ಮಾಡಿದ್ದಾರೆ.

ಯುವತಿ ಐಎಎಸ್​ ಟಾಪರ್​ ಅಲ್ಲ, ಆ ವ್ಯಕ್ತಿ ಆಕೆಯ ತಂದೆಯೂ ಅಲ್ಲ..! 

ಆದ್ರೆ ಈ ಫೋಟೋ ಬಗ್ಗೆ ಹೇಳಲಾಗಿರೋ ಕಥೆಯೇ ಫೇಕ್​​. ಆ ಯುವತಿ ಐಎಎಸ್​ ಟಾಪರ್​ ಅಲ್ಲ, ಆಕೆಯ ತಂದೆ ರಿಕ್ಷಾ ಎಳೆಯುವವರೂ ಅಲ್ಲ. ಯುವತಿಯ ಇನ್ಸ್​​ಟಾಗ್ರಾಂ ಅಕೌಂಟ್​ ಲಭ್ಯವಾಗಿದ್ದು, ಆಕೆಯ ಹೆಸರು ಶ್ರಮೋನಾ ಪೊದ್ದಾರ್​ ಅಂತ ತಿಳಿದುಬಂದಿದೆ. ಇವರು ಟ್ರಾವೆಲ್​ ಬ್ಲಾಗರ್​ ಆಗಿದ್ದು, ಕೋಲ್ಕತ್ತಾದ ಚಂದನ್​ನಗರದ ನಿವಾಸಿಯಾಗಿದ್ದಾರೆ. ಈಕೆಯ ತಂದೆ ಡಾಕ್ಟರ್​. ಹಾಗೇ ಯುವತಿ ಐಎಎಸ್​ ಟಾಪರ್​ ಅಲ್ಲ ಅಂತ ಸ್ವತಃ ಮಾಧ್ಯಮವೊಂದಕ್ಕೆ ಸ್ಪಷ್ಟಪಡಿಸಿದ್ದಾರೆ. ಉತ್ತರ ಕೊಲ್ಕತ್ತಾದ ಶೋಭಾ ಬಜಾರ್​ ಬಳಿ ಕಳೆದ ಏಪ್ರಿಲ್​​​ನಲ್ಲಿ ತನ್ನ ಸ್ನೇಹಿತ ಈ ಫೋಟೋ ಕ್ಲಿಕ್ಕಿಸಿದ್ದಾಗಿ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಶ್ರಮೋನಾ ವೈಲ್ಡ್​​ಕ್ರಾಫ್ಟ್​​ ಬ್ರ್ಯಾಂಡ್​​ಗಾಗಿ ಕ್ಯಾಂಪೇನ್​ ನಡೆಸುತ್ತಿದ್ದರು. ಇದಕ್ಕಾಗಿ ಕೊಲ್ಕತ್ತಾದ ವಿವಿಧ ಭಾಗಗಳಲ್ಲಿ ಶೂಟ್​​ ಮಾಡುತ್ತಿದ್ದಾಗ ಕ್ಲಿಕ್ ಮಾಡಲಾದ ಫೋಟೋ ಇದು.

ಅಸಲಿ ಕಥೆ ಏನು?
ಇನ್ನು ಈ ಬಗ್ಗೆ ನಿಜವಾದ ಕಥೆಯನ್ನು ಹಂಚಿಕೊಂಡಿರೋ ಶ್ರಮೋನಾ, ಚಿಕ್ಕಂದಿನಿಂದಲೂ ನಾನು ರಿಕ್ಷಾ ಬಂಡಿ ಎಳೆಯುವವರನ್ನು ನೋಡಿದರೆ ಭಾವುಕಳಾಗುತ್ತಿದ್ದೆ. ಇದಕ್ಕಾಗಿ ನಾನು ಇಂತಹ ರಿಕ್ಷಾಗಳಲ್ಲಿ ಹೋಗುತ್ತಿರಲಿಲ್ಲ. ಆದ್ರೆ ನಾವು ಹೋದರೇನೆ ಆ ವ್ಯಕ್ತಿಗೆ ಹಣ ಸಂಪಾದನೆಯಾಗುತ್ತಿದ್ದುದು ಅನ್ನೋದು ಕೂಡ ತಿಳಿಯಿತು. ಬಂಡಿ ಎಳೆಯುವುದು ಹೇಗಿರಬೇಡ? ಅದು ನಿಜಕ್ಕೂ ಕಷ್ಟವಾದ ಕೆಲಸ. ಅದು ಹೇಗಿರುತ್ತೆ ಅಂತ ತಿಳಿದುಕೊಳ್ಳೋಕೆ ನಾನು ಇತ್ತೀಚೆಗೆ ಕೊಲ್ಕತ್ತಾಗೆ ಹೋದಾಗ ನಾನೇ ರಿಕ್ಷಾ ಬಂಡಿ ಎಳೆಯಲು ಪ್ರಯತ್ನಿಸಿದೆ, ಚಾಲಕನನ್ನು ಹಿಂದೆ ಕುಳಿತುಕೊಳ್ಳಲು ಹೇಳಿದೆ. ಅಕ್ಕಪಕ್ಕ ನಿಂಯತಿದ್ದವರು ನನ್ನನ್ನು ಆಶ್ಚರ್ಯದಿಂದ ನೋಡಿದರು. ಬಂಡಿ ಎಳೆಯುವುದರಿಂದ ಎಷ್ಟು ನೋವಾಗುತ್ತದೆ ಅನ್ನೋದು ನನಗೆ ಕೂಡಲೇ ಅರ್ಥವಾಯಿತು. ವೈಲ್ಡ್​ಕ್ರಾಫ್ಟ್​​ಗಾಗಿ ಶೂಟ್​ ಮಾಡುವಾಗ ನನ್ನ ಸ್ನೇಹಿತ  ಈ ಫೋಟೋ ಕ್ಲಿಕ್ಕಿಸಿದ. ಇದನ್ನ ನಾನು ಇನ್ಸ್​ಟಾಗ್ರಾಂನಲ್ಲಿ ಶೇರ್ ಮಾಡಿದ್ದೆ ಎಂದು ಹೇಳಿದ್ದಾರೆ.

ಇನ್ನು ಈ ಫೋಟೋ ಬಗ್ಗೆ ಸುಳ್ಳು ಕಥೆ ಕಟ್ಟಿ ಶೇರ್​ ಮಾಡಲಾಗುತ್ತಿರುವುದು ಕೂಡ ಶರ್ಮೋನಾಗೆ ಗೊತ್ತಾಗಿದೆ. ಇದರಿಂದ ತುಂಬಾ ನೋವಾಗುತ್ತದೆ. ಯಾಕಂದ್ರೆ ನನ್ನ ಪೋಷಕರನ್ನೂ ಮಧ್ಯೆ ತಂದು ಸುಳ್ಳು ಕಥೆ ಕಟ್ಟಿದ್ದಾರೆ. ಈ ಬಗ್ಗೆ ಕೆಲವರು ನನ್ನ ತಂದೆಗೆ ಫೋನ್ ಮಾಡಿ ವಿಚಾರಿಸಿದ್ದಾರೆ ಎಂದು ಶ್ರಮೋನಾ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬರೋ ಸುದ್ದಿಗಳೆಲ್ಲ ನಿಜವಲ್ಲ ಅನ್ನೋದನ್ನು ಮತ್ತೊಮ್ಮೆ ಈ ಸ್ಟೋರಿ ಕೂಡ ನೆನಪಿಸಿದೆ..!

View this post on Instagram

Repost from @wildcraftin So here goes the story behind this. Since childhood, whenever I used to visit the north and central part of Calcutta essentially, I would feel sympathetic everytime I would spot a hand pulled rickshaw, thereby choosing not to use them. Until recently when my sympathy coincided with the realization that we're helping to earn their bread and butter only when we're taking a ride. So last time I was in Calcutta, the #wildcraftwildling in me decided to pull a handpull rickshaw instead, to see how difficult and strenuous it really is. I asked the rickshaw uncle to have a seat while I pulled him around on the streets of Shobhabazar, tickling the bell at intervals while the whole street stood and watched in awe. I realized though there's a lot of mechanism involved, it wasn't a piece of cake at all. All my years of inquistiveness transpired to salutation for the extreme precision and relentless efforts that go in during each trip made. Yet each day they wake up with the same enthusiasm to battle the odds. This spirit is what inspires me to be #ReadyforAnything. #GoStreet #kolkata #calcutta #calcuttacacaphony #travel #handpullrickshaw #wildcraft #adventure #kolkatatourism #MishtiAndMeatftWildcraft Photo by @bhaskar_0007

A post shared by Shramona Poddar (@mishti.and.meat) on

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv