ಅತ್ತೆ-ಸೊಸೆಗೆ ಮಾತ್ರವಲ್ಲಾ.. ಕತ್ತೆಗೂ ಬಂತು ಕಾಲ..!

ಮೊನಿವಿರಾ (ಕೊಲಂಬಿಯಾ): ಅತ್ತೆಗೊಂದು ಕಾಲ ಆದ್ರೆ.. ಸೊಸೆಗೊಂದು ಕಾಲ.. ಅನ್ನೋ ಗಾದೆ ತುಂಬಾ ಫೇಮಸ್​ ಆದ್ರೆ.. ಈಗ ಅತ್ತೆ-ಸೊಸೆ ಮಾತ್ರ ಅಲ್ಲಾ.. ಕತ್ತೆಗೂ ಕಾಲ ಬಂದಿದೆ ಕಣ್ರೀ.. ಅರೇ ಇವ್ರೇನ್​ ಹೇಳ್ತಿದಾರೆ.. ಕತ್ತೆ ಇರೋದೆ ಭಾರ ಹೊರುವುದಕ್ಕೆ. ಬಿಟ್ರೆ ಅದನ್ಯಾರೂ ಸಾಕೋದು ಇಲ್ಲ, ಮತ್ತೆ ಕತ್ತೆಗೆ ಹೇಗೆ ಒಳ್ಳೆ ಕಾಲ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.
ಕೊಲಂಬಿಯಾದ ಮೊನಿವಿರಾ ಎಂಬಲ್ಲಿ ಕಳೆದ 14 ವರ್ಷಗಳಿಂದ ಪ್ರತಿ ವರ್ಷ ‘ಕತ್ತೆ ವಾರ್ಷಿಕೋತ್ಸವ’ ಆಚರಿಸಲಾಗುತ್ತೆ. ಇದಕ್ಕಾಗಿ ಕತ್ತೆಗಳಿಗೆ ವಿವಿಧ ಬಗೆಯ ಅಲಂಕಾರಗಳನ್ನ ಮಾಡಲಾಗುತ್ತದೆ. ಬಗೆಬಗೆಯ ವಸ್ತ್ರಗಳನ್ನ ಕತ್ತೆಗೆ ತೊಡಿಸಿ, ಸ್ಪರ್ಧೆಗೆ ಬಿಡಲಾಗುತ್ತದೆ. ಅಲ್ಲದೇ ಐಯ್​ಬ್ರೋ​, ಲಿಪ್​​​ಸ್ಟಿಕ್​, ಬ್ಲಶ್​​ ಹಾಕಿ ತಿದ್ದಿ ತೀಡಿ ಹುಡುಗಿಯಂತೆ ಶೃಂಗಾರ ಮಾಡ್ತಾರೆ.

ಜೊತೆಗೆ ನೆಕ್​ಲೇಸ್, ಹಣೆಪಟ್ಟಿ ಹಾಗೂ ಗ್ಯಾರಿಷ್ ಪ್ರಿಂಟ್​ ಉಡುಗೆಯನ್ನ ಕತ್ತೆಗೆ ಹಾಕಲಾಗುತ್ತದೆ. ಸೌಂದರ್ಯ ಸ್ಪರ್ಧೆ, ವಸ್ತ್ರ ಸ್ಪರ್ಧೆ, ರನ್ನಿಂಗ್​ ಸ್ಪರ್ಧೆ ಹೀಗೆ ಹಲವು ಕಾಂಪಿಟೇಷನ್​ನಲ್ಲಿ ಗೆಲುವು ಸಾಧಿಸಿದ ಕತ್ತೆಗೆ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ರೈತಾಪಿ ಹುಡುಗಿಯಂತೆ ಶೃಂಗಾರ ಮಾಡಲಾಗಿದ್ದ ಕತ್ತೆ, ವಿಜಯ ಸಾಧಿಸಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv