ಗಣರಾಜ್ಯೋತ್ಸವಕ್ಕೆ ಟ್ರಂಪ್‌ ಬರ್ತಾರಾ ಇಲ್ವಾ..

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಿನ ವರ್ಷದ ಗಣರಾಜ್ಯೋತ್ಸದ ವಿಶೇಷ ಅತಿಥಿಯಾಗಿ ಆಗಮಿಸೋದು ಇನ್ನೂ ಕನ್ಫರ್ಮ್‌ ಆಗಿಲ್ಲ. ಹೀಗಾಗಿ ಟ್ರಂಪ್‌ ಭಾರತಕ್ಕೆ ಬರ್ತಾರಾ ಇಲ್ವಾ ಅನ್ನೋದು ಅನುಮಾನಗಳು ಶುರುವಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸರ್ಕಾರ ಇನ್ನೂ ದಿನಾಂಕವೇ ನಿಗದಿಯಾಗಿಲ್ಲ ಅಂತ ಹೇಳುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಭಾರತಕ್ಕೆ ಭೇಟಿ ನೀಡುವ ಕುರಿತಾಗಿ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಯುಎಸ್ ಪ್ರೆಸ್ ಕಾರ್ಯದರ್ಶಿ ಸಾರ್ಹಾ ಸ್ಯಾಂಡರ್ಸ್, ಈ ಬಗ್ಗೆ ವೈಟ್‌ಹೌಸ್‌ನಿಂದ ಇನ್ನೂ ಯಾವುದೇ ತೀರ್ಮಾನವಾಗಿಲ್ಲ ಅಂತ ಹೇಳಿದ್ದಾರೆ. ಯುಎಸ್ ಕಾರ್ಯದರ್ಶಿ ಮೈಕ್ ಪ್ಯಾಂಪೊ ಮತ್ತು ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಎನ್. ಮ್ಯಾಥೀಸ್‌ ಮುಂದಿನ ತಿಂಗಳು ಭಾರತಕ್ಕೆ ಆಗಮಿಸುತ್ತಿದ್ದು, ಟ್ರಂಪ್‌ ಭೇಟಿ ಬಗ್ಗೆ ಇಲ್ಲಿನ ಅಧಿಕಾರಿಗಳೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ.