ಡಿ.ಕೆ.ಶಿವಕುಮಾರ್​ಗೆ ರವಿ ಪೂಜಾರಿ ಧಮ್ಕಿ ಹಾಕಿದ್ದ ಕೇಸ್​ ರೀ ಓಪನ್..!?

­ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಗಾಗಿ ಬೆನ್ನು ಬಿದ್ದಿರುವ ನಗರ ಪೊಲೀಸರು, ರವಿ ­ಪೂಜಾರಿ ಮೇಲಿನ ಹಳೇ ಕೇಸ್​ಗಳನ್ನ ರೀ ಓಪನ್ ಮಾಡುತ್ತಿದ್ದಾರೆ. 2016 ರಲ್ಲಿ ಸಚಿವ ಡಿ.ಕೆ.ಶಿವಕುಮಾರ್​ಗೆ, ರವಿ ಪೂಜಾರಿ ಧಮ್ಕಿ ಹಾಕಿದ್ದ ಎನ್ನಲಾಗಿರುವ ಕೇಸ್​ಗೂ ಮರುಜೀವ ನೀಡುವ ಚಿಂತನೆಯಲ್ಲಿದ್ದಾರೆ. ಧಮ್ಕಿ ಹಾಕಿದ್ದ ವೇಳೆ ಡಿ.ಕೆ.ಶಿವಕುಮಾರ್​ ಸಹೋದರ ಡಿ.ಕೆ.ಸುರೇಶ್​ ಸದಾಶಿವನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಎಫ್ಐಆರ್ ಆಗಿತ್ತು. ಆದ್ರೆ ತಲೆ ಮರೆಸಿಕೊಂಡಿದ್ದರಿಂದ ಸಿ ರಿಪೋರ್ಟ್ ಹಾಕಿ ಕೇಸ್ ಕ್ಲೋಸ್ ಮಾಡಲಾಗಿತ್ತು. ಸದ್ಯ ರವಿ ಪೂಜಾರಿ ಪಶ್ಚಿಮ ಆಫ್ರಿಕಾದ ಸೆನಗಲ್ ದೇಶದಲ್ಲಿ ಬಂಧನವಾಗ್ತಿದ್ದಂತೆ, ಆತನನ್ನ ಬೆಂಗಳೂರಿಗೆ ಕರೆತರಲು ಪ್ರಯತ್ನ ನಡೆಯುತ್ತಿದೆ. ಜೊತೆಗೆ ರವಿ ಪೂಜಾರಿ ಮೇಲಿರುವ ಎಲ್ಲಾ ಕೇಸ್​ಗಳೂ ರೀ ಓಪನ್ ಆಗ್ತಿವೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv