ಆ ಒಂದು ಫೋಟೋದಿಂದ ಸೆನೆಗಲ್​ನಲ್ಲಿ ಸಿಕ್ಕಿಬಿದ್ದ ಪಾತಕಿ ರವಿ ಪೂಜಾರಿ..!

ಬೆಂಗಳೂರು: ಕರ್ನಾಟಕದಲ್ಲೇ 60 ಕ್ಕೂ ಹೆಚ್ಚು ಕೇಸ್​ಗಳಲ್ಲಿ ಭಾಗಿಯಾಗಿ ಪರಾರಿಯಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಪಶ್ಚಿಮ ಆಫ್ರಿಕಾದ ಸೆನಗಲ್ ದೇಶದಲ್ಲಿ ಬಂಧನವಾಗಿದ್ದ. ಸದ್ಯ ಆತನನ್ನ ಸೆನಗಲ್ ಪೊಲೀಸರಿಂದ ವಶಕ್ಕೆ ಪಡೆಯಲು ಕರ್ನಾಟಕ ಪೊಲೀಸರು ಪಣ ತೊಟ್ಟಿದ್ದಾರೆ. ಆದ್ರೆ ರವಿ ಪೂಜಾರಿಯನ್ನ ಬಂಧಿಸಿದ ಸ್ಟೋರಿಯೇ ಒಂದು ರೋಚಕ. ಕೇವಲ ಒಂದು ಪೋಟೋವನ್ನ ಆಧರಿಸಿ ರವಿ ಪೂಜಾರಿಯನ್ನ ಪತ್ತೆಹಚ್ಚಲಾಯಿತು.

ಪಾತಕಿ ಸುಳಿವು ಕೊಟ್ಟಿತ್ತು ಆ ಪೋಟೋ ಯಾವುದು..!?
ಬೆಂಗಳೂರಿನಿಂದ ಪರಾರಿಯಾಗಿದ್ದ ಪಾತಕಿ ರವಿ ಪೂಜಾರಿ ಸೀದಾ ಪಶ್ಚಿಮ ಆಫ್ರಿಕಾದ ಸೆನಗಲ್ ದೇಶಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದ. ಅಲ್ಲೂ ರಿಯಲ್​ ಎಸ್ಟೇಟ್​ ದಂಧೆಯಲ್ಲಿ ತೊಡಗಿಕೊಂಡಿದ್ದ. ಅಲ್ಲದೇ ಇತರೆ ಚಟುವಟಿಕೆಗಳಲ್ಲೂ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಸೆನಗಲ್​ನಲ್ಲಿ ಭಾರತೀಯ ಮೂಲದವರು ನಡೆಸುತ್ತಿದ್ದ ಕ್ರಿಕೆಟ್ ಪಂದ್ಯಾವಳಿ ಒಂದಕ್ಕೆ ರವಿ ಪೂಜಾರಿ ಅತಿಥಿಯಾಗಿ ಹೋಗಿದ್ದ. ಅಲ್ಲದೇ ಕ್ರಿಕೆಟ್ ಪಂದ್ಯಾವಳಿ ಮುಗಿದ ಬಳಿಕ ಆಟಗಾರರಿಗೆ ಆತನೇ ಟ್ರೋಫಿ ವಿತರಿಸಿದ್ದ. ಪಂದ್ಯಾವಳಿ ವೀಕ್ಷಣೆಗಾಗಿ ಗ್ಯಾಲರಿಯಲ್ಲಿ ರವಿ ಪೂಜಾರಿ ಕ್ರಿಕೆಟ್​ ಜೆರ್ಸಿ ಧರಿಸಿದ್ದ ವ್ಯಕ್ತಿಯೊಬ್ಬನ ಪಕ್ಕದಲ್ಲಿ ಕುಳಿತಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಪೋಟೋ ಕರ್ನಾಟಕ ಪೊಲೀಸರ ಕೈಗೂ ಸಿಕ್ಕಿತ್ತು. ಆದ್ರೆ ಕರ್ನಾಟಕ ಪೊಲೀಸರಿಗೆ ಅನುಮಾನ ಮೂಡಲು ಕಾರಣ ರವಿ ಪೂಜಾರಿ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಜೆರ್ಸಿ ಮೇಲೆ “ಇಂಡಿಯನ್ ಸೆನೆಗಲ್ ಕ್ರಿಕೆಟ್ ಕ್ಲಬ್” ಅನ್ನೊ ಬರಹ. ಇದನ್ನ ನೋಡಿದ ಪೊಲೀಸರಿಗೆ ರವಿ ಪೂಜಾರಿ ಸೆನೆಗಲ್​ನಲ್ಲಿರೋದು ಪಕ್ಕಾ ಆಗಿತ್ತು. ಕರ್ನಾಟಕ ಪೊಲೀಸರ ಮಾಹಿತಿ ಆಧರಿಸಿ ಸೆನೆಗಲ್‌ ಪೊಲೀಸರು ಕಾರ್ಯಾಚರಣೆ ಆರಂಭಿಸಿ ರವಿ ಪೂಜಾರಿಯನ್ನ ಬಂಧಿಸಿದ್ದಾರೆ. ಸೆನೆಗಲ್​ನಲ್ಲಿ ರವಿ ಪೂಜಾರಿ ಆ್ಯಂಟನಿ ಫೆರ್ನಾಂಡಿಸ್ ಹೆಸರಿನಿಂದ ಗುರುತಿಸಿಕೊಂಡಿದ್ದ. ಇನ್ನು ರವಿ ಪೂಜಾರಿ ಪರ ವಕೀಲರು ಈತ ರವಿ ಪೂಜಾರಿ ಅಲ್ಲ ಆ್ಯಂಟನಿ ಫರ್ನಾಂಡಿಸ್​ ಎಂದಿದ್ದರು. ಆದ್ರೆ ಇಂಡಿಯನ್ ಎಂಬೆಸಿ ರವಿ ಪೂಜಾರಿಯ ಫಿಂಗರ್‌ಪ್ರಿಂಟ್ ನೀಡಿತ್ತು. ಭಾರತದಿಂದ ತರಿಸಿಕೊಂಡ ರವಿ ಪೂಜಾರಿಯ ಫಿಂಗರ್‌ಪ್ರಿಂಟ್ ರವಿ ಪೂಜಾರಿಯ ಸುಳಿವು ನೀಡಿತ್ತು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv