ಎಲೆಕ್ಷನ್‌ ಪ್ರಚಾರಕ್ಕೂ ನನಗೂ ಸಂಬಂಧವಿಲ್ಲ, ಯಾರೇ ಕರೆದ್ರೂ ಹೋಗಲ್ಲ: ಡಾಲಿ ಧನಂಜಯ್​

ಮೈಸೂರು: ಎಲೆಕ್ಷನ್‌ ಪ್ರಚಾರಕ್ಕೂ ನನಗೂ ಸಂಬಂಧವಿಲ್ಲ. ನನ್ನನ್ನೂ ಇದುವರೆಗೂ ಯಾರೂ ಪ್ರಚಾರಕ್ಕೆ ಕರೆದಿಲ್ಲ. ಯಾರೇ ಕರೆದರೂ ನಾನು ಹೋಗುವುದಿಲ್ಲ  ಎಂದು ನಟ  ಡಾಲಿ ಧನಂಜಯ್ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ನಡೆದ ಸೈಕ್ಲೋಥಾನ್​ ಕಾರ್ಯಕ್ರಮದಲ್ಲಿ  ಧನಂಜಯ್​ ಇಂದು ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಅವರು, ಇದುವರೆಗೂ ನಾನು ಪ್ರಚಾರಕ್ಕೆ ಹೋಗಿಲ್ಲ. ಚುನಾವಣೆಯಲ್ಲಿ ಒಳ್ಳೆಯವರು ಆಯ್ಕೆಯಾಗಬೇಕು ಎಂದರು. ಈ ಬಾರಿಯೂ ನಾನು ಪ್ರಚಾರಕ್ಕೆ ಹೋಗಲ್ಲ‌ ಎಂದು ಚುನಾವಣಾ ಪ್ರಚಾರದಿಂದ ಧನಂಜಯ್​​​ ಅಂತರ ಕಾಯ್ದುಕೊಂಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv