ಬೆಕ್ಕಿಗಿಂತಲೂ ನಾಯಿ ಸಾಕಿದ್ರೆ ನಿಮಗೆ ಡಬಲ್ ಖುಷಿ..!

ಪೆಟ್ಸ್​ಗಳನ್ನು ಸಂಗಾತಿಯಂತೆ ಪ್ರೀತಿಸಿ, ಅಮ್ಮನಂತೆ ಪೋಷಿಸಿ ಅವುಗಳೊಂದಿಗೆ ಸಮಯ ಕಳೆಯುವ ಜನರು ಸಾಕಷ್ಟಿದ್ದಾರೆ. ನಾಯಿ, ಬೆಕ್ಕು ಹೀಗೆ ಹಲವಾರು ಪ್ರಾಣಿಗಳೇ ಪ್ರಪಂಚ ಅಂತಾ ಬದುಕುವವರೂ ಇದ್ದಾರೆ. ಆದ್ರೆ, ಈ ಸಾಕು ಪ್ರಾಣಿಗಳೂ ನಿಮ್ಮ ಖುಷಿಯ ಮೇಲೆ, ನಿಮ್ಮ ಸಂತೋಷದ ಮೇಲೆ ಪರಿಣಾಮ ಬೀರುತ್ತಂತೆ. ಇದನ್ನ ಸಮೀಕ್ಷೆಯ ವರದಿಯೊಂದು ಬಹಿರಂಗಪಡಿಸಿದೆ.

ನಾಯಿ ಹೊಂದಿರುವವರು ಖುಷಿಯಾಗಿರ್ತಾರಾ ಅಥವಾ ಬೆಕ್ಕು ಸಾಕುವವರು ಖುಷಿಯಾಗಿರ್ತಾರಾ ಅಂತಾ ಅಮೆರಿಕಾ ಮೂಲದ ಸಂಸ್ಥೆಯೊಂದು ಸಮೀಕ್ಷೆ ನಡೆಸಿದೆ. ನಾಯಿ​ ಸಾಕುವವರು ಬೆಕ್ಕು​ ಸಾಕುವವರಿಗಿಂತ ಎರಡು ಪಟ್ಟು ಹೆಚ್ಚು ಖುಷಿಯಾಗಿರುತ್ತಾರೆ ಅಂತಾ 2018ರ ಜನರಲ್ ಸೋಶಿಯಲ್ ಸರ್ವೆ ಹೇಳಿದೆ. ತಮ್ಮ ಸಾಕುಪ್ರಾಣಿಗಳ ಜೊತೆ ಜನ ಹೇಗೆ ಸಂಭಾಷಣೆ ನಡೆಸುತ್ತಾರೆ ಅಂತಾನೂ ಈ ಸರ್ವೆಯಲ್ಲಿ ಪ್ರಶ್ನೆ ಕೇಳಲಾಗಿತ್ತಂತೆ. ಇನ್ನು ನಾಯಿಗಳನ್ನ ಸಾಕಿದರೆ ಒತ್ತಡದ ಸಮಯದಲ್ಲಿ ನಾಯಿಗಳು ಕಂಫರ್ಟ್​ ಝೋನ್​ ಇದ್ದಂತೆ. ಅವುಗಳ ಜೊತೆ ಆಟವಾಡ್ತೀವಿ. ನಮ್ಮ ಕುಟುಂಬದ ಒಬ್ಬ ಸದಸ್ಯನಂತೆ ನೋಡಿಕೊಳ್ಳುತ್ತೇವೆ ಅಂತಾ ಹಲವು ನಾಯಿಗಳ ಮಾಲೀಕರು ​ ಹೇಳಿದ್ದಾರೆ ಅಂತಾ ಈ ಸರ್ವೆ ತಿಳಿಸಿದೆ.

ಇನ್ನು ಮನುಷ್ಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹಿಂದೇಟು ಹಾಕಬಹುದು. ಆದ್ರೆ ಬೆಕ್ಕುಗಳು ತಮ್ಮ ಭಾವನೆಗಳನ್ನು ಪ್ರಾಮಾಣಿಕವಾಗಿ ಹೊರಹಾಕುತ್ತವೆ ಅಂತಾ ಬೆಕ್ಕುಗಳ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.