ಓನರ್​​ ಪ್ರಾಣ ಉಳಿಸಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡ ನಾಯಿ

ಮನೆಯಲ್ಲಿ ನಾಯಿಗಳನ್ನ ಸಾಕಿದ್ದರೆ ಅವುಗಳ ನಿಯತ್ತು ಎಂಥದ್ದು, ಅವುಗಳು ತೋರಿಸೋ ಪ್ರೀತಿ ಎಂಥದ್ದು ಅಂತ ಮಾಲೀಕರಿಗೆ ಗೊತ್ತಿರುತ್ತದೆ. ನಾಯಿಗಳು ತನ್ನ ಮಾಲೀಕನನ್ನು ಆಪತ್ತಿನಿಂದ ಕಾಪಾಡಿರೋ ಸಾಕಷ್ಟು ಪ್ರಕರಣಗಳಿವೆ. ಅದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. ನಾಯಿಯೊಂದು ತನ್ನ ಓನರ್​ ಪ್ರಾಣ ರಕ್ಷಣೆ ಮಾಡಲು ಹೋಗಿ ವಿಷಕಾರಿ ಹಾವಿನಿಂದ ಕಚ್ಚಿಸಿಕೊಂಡಿದೆ.

ಪೌಲಾ ಗೋಡ್​ವಿನ್​ ಅನ್ನೋರು ತನ್ನ ಮುದ್ದಿನ ಗೋಲ್ಡನ್​​ ರಿಟ್ರೀವರ್​​ ನಾಯಿ ಟಾಡ್​​​ ಜೊತೆ ಆರಿಜೋನಾದಲ್ಲಿ ಟ್ರೆಕ್ಕಿಂಗ್​ ಹೋಗಿದ್ರು. ಕೆಳಗೆ ಇಳಿಯುವ ವೇಳೆ ಪೌಲಾ, rattle snake ಜಾತಿಯ ವಿಷಕಾರಿ ಹಾವಿನ ಮೇಲೆ ಇನ್ನೇನು ಕಾಲಿಡಬೇಕು ಎನ್ನುವಷ್ಟರಲ್ಲಿ ನಾಯಿ ಬಂದು ಅವರನ್ನ ಕಾಪಾಡಿದೆ. ಈ ಘಟನೆ ಬಗ್ಗೆ ಪೌಲಾ ಫೇಸ್​ಬುಕ್​​ನಲ್ಲಿ ಬರೆದುಕೊಂಡಿದ್ದಾರೆ. ನನ್ನ ಕಾಲಿನ ಮುಂದೆಯೇ ನಾಯಿ ಎಗರಿತು. ಇಲ್ಲವಾದ್ರೆ ಹಾವು ನನಗೆ ಕಚ್ಚಿಬಿಡುತ್ತಿತ್ತು ಎಂದು ಹೇಳಿದ್ದಾರೆ. ಆದ್ರೆ ದುರಾದೃಷ್ಟಕ್ಕೆ ಹಾವು ನಾಯಿಯನ್ನ ಕಚ್ಚಿದೆ.

ಪೌಲಾ ಕೂಡಲೇ ನಾಯಿಯನ್ನು ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ನೀಡಲಾಗಿದೆ. ಸದ್ಯ ಟಾಡ್​​ ಚೇತರಿಸಿಕೊಳ್ಳುತ್ತಿದೆ. ಹಾವಿನ ಕಡಿತದಿಂದ ನಾಯಿಯ ಮುಖ ಊದಿಕೊಂಡಿರುವ ಫೋಟೋಗಳನ್ನ ಪೌಲಾ ಫೇಸ್​​ಬುಕ್​​​ನಲ್ಲಿ ಹಂಚಿಕೊಂಡು, ನನ್ನ ಸ್ವೀಟ್​ ಹೀರೋ ಬೇಗ ಗುಣಮುಗವಾಗಲಿ ಎಂದು ಹಾರೈಸಿ ಅಂತ ಬರೆದುಕೊಂಡಿದ್ದಾರೆ. ಈ ಪೋಸ್ಟ್​​ ಹಂಚಿಕೊಂಡಾಗಿನಿಂದ 8 ಸಾವಿರಕ್ಕೂ ಹೆಚ್ಚು ಲೈಕ್ಸ್​ ಬಂದಿದ್ದು, 3 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ಶೇರ್ ಮಾಡಿದ್ದಾರೆ. ಜನ ಹೀರೋ ನಾಯಿಯನ್ನ ಕೊಂಡಾಡಿದ್ದಾರೆ.

So this morning was up bright and early to go on a hike on 7 th street carefree . It was a beautiful morning but as we…

Posted by Paula Godwin on Friday, June 29, 2018