ಶ್ವಾನದ ಸ್ವಾಮಿ ನಿಷ್ಠೆ ಪರಾಕಾಷ್ಠೆ..!

ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಹಿಂದಿನಿಂದಲೂ ನಾವು ಈ ಮಾತು ಕೇಳಿಕೊಂಡು ಬಂದಿದ್ದೇವೆ. ಅದೆಷ್ಟೋ ಬಾರಿ ಮನುಷ್ಯನಿಗೆ ನಾವು ತೋರಿದ ಅನುಕಂಪ ಲೆಕ್ಕಕ್ಕೇ ಬರೋದಿಲ್ಲಾ. ಅದಕ್ಕೇ ಇರಬೇಕು ಮನುಷ್ಯ, ಮನುಷ್ಯನನ್ನು ಮರೆತು ಪ್ರಾಣಿಗಳನ್ನು ಪ್ರೀತಿಸಲು ಶುರು ಮಾಡಿದ್ದಾನೆ.
ಅದ್ರಲ್ಲೂ ಶ್ವಾನವೆಂದರೆ ಅದೇಕೋ ಮನುಷ್ಯನಿಗೆ ಅತಿ ಹೆಚ್ಚು ಪ್ರೀತಿ. ಅದೇ ರೀತಿ ಶ್ವಾನಗಳೂ ಕೂಡಾ ಯಾವತ್ತೂ ತನ್ನ ಸ್ವಾಮಿ ನಿಷ್ಠೆ ಮರೆಯೋದಿಲ್ಲಾ. ಶ್ವಾನಗಳು ತನ್ನವರ ಪ್ರಾಣಕ್ಕೆ ಕಂಟಕ ಬಂದಾಗ ಅದನ್ನು ಎದುರಿಸಿ ನಿಂತು ತನ್ನವರನ್ನು ಉಳಿಸಿಕೊಂಡಿರುವ ಅದೆಷ್ಟೋ ನಿದರ್ಶನಗಳು ನಮಗೆ ಕಾಣ ಸಿಗುತ್ತವೆ. ಅದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಇಂಟರ್​​ನೆಟ್​​ನಲ್ಲಿ ವೈರಲ್ ಆಗಿರೋ ದೃಶ್ಯವೊಂದು ಮನ ಮಿಡಿಯುತ್ತದೆ.

ಅಷ್ಟಕ್ಕೂ ಆಗಿದ್ದು ಏನೆಂದ್ರೆ, ಫಿಲಿಪ್ಪೀನ್ಸ್​ನ ದಾವೋದಲ್ಲಿ ಡೆನಿಲೊ ಅಲರ್ಕೊನ್ ಎಂಬ ವ್ಯಕ್ತಿಯೊಬ್ಬರು ಡಿಗೊಂಗ್​ ಹೆಸರಿನ ನಾಯಿಯನ್ನು ಸಾಕಿಕೊಂಡಿದ್ದರು. ಮೊದಲಿನಿಂದಲೂ ಅವರಿಗೆ ವಾಕಿಂಗ್​ ಹೋಗುವಾಗ ತಮ್ಮ ನೆಚ್ಚಿನ ಡಿಗೊಂಗ್​ನನ್ನು ಕರೆದುಕೊಂಡು ಹೋಗುವ ಹವ್ಯಾಸವಿತ್ತು. ಆದರೆ ಬೈಕ್​ ಆಕ್ಸಿಡೆಂಟ್​ ಒಂದರಲ್ಲಿ ಮೆದುಳು ಬಳ್ಳಿಗೆ ಬಲವಾದ ಪೆಟ್ಟು ಬಿದ್ದು ಕಾರಣ ಡೆನಿಲೊ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರು. ಅಪಘಾತ ನಂತರದ ದಿನಗಳಲ್ಲಿ ಅವರು ನಡೆದಾಡಲು ವೀಲ್​ಚೇರ್​ ಸಹಾಯ ಪಡೆದುಕೊಂಡಿದ್ದರು. ಹೀಗಿದ್ದಾಗಿಯೂ ರಸ್ತೆಯಲ್ಲಿ ವೀಲ್​ಚೇರ್​ ನಲ್ಲಿ ಹೋಗುವಾಗಲೆಲ್ಲಾ ಡಿಗೊಂಗ್, ತನ್ನ ಮಾಲೀಕನ ಜೊತೆ ಹೋಗುತ್ತಿತ್ತು. ಅಷ್ಟೇ ಅಲ್ಲ ಸ್ವಾಮಿ, ರಸ್ತೆಯಲ್ಲಿ ಹೋಗುವಾಗ ಡಿಗೊಂಗ್​​, ತನ್ನ ಮುಂದಿನ ಎರಡು ಕಾಲುಗಳನ್ನು ಉಪಯೋಗಿಸಿ ಮಾಲೀಕನ ವೀಲ್​ಚೇರ್​ ಮುಂದೆ ತಳ್ಳಲು ಸಹಾಯ ಮಾಡುತ್ತೆ. ಈ ಅದ್ಭುತ ದೃಶ್ಯವನ್ನು ಮಿಸಿಸ್​ ಫೈತ್​ ಎಲ್​ ರೆವಿಲ್ಲಾ, ಎಂಬ ವಿದ್ಯಾರ್ಥಿನಿ ವಿಡಿಯೋ ಮಾಡಿಕೊಂಡಿದ್ದಾರೆ.

‘ಅಂತಃಕರಣ ಕಲುಕುವ ಈ ದೃಶ್ಯದಲ್ಲಿ ಡಿಗೊಂಗ್​​, ತನ್ನ ಮಾಲೀಕನ ವೀಲ್​ಚೇರ್​ ತಳ್ಳುವುದಕ್ಕೆ ಸಹಾಯ ಮಾಡುತ್ತಿದ್ದು, ಅದಕ್ಕೆ ನಾನು ಸಾಕ್ಷಿಯಾಗಿರುವುದಕ್ಕೆ ಖುಷಿಯಾಗುತ್ತಿದೆ’ ಅಂತಾ ಬರೆದು ಕೊಂಡು ಆ ವಿದ್ಯಾರ್ಥಿನಿ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಿದ್ದಾರೆ. ಈ ವಿಡಿಯೋ ಸಖತ್​ ವೈರಲ್​ ಆಗಿದ್ದು ಹಲವಾರು ಮಂದಿ ಮೆಚ್ಚಿಕೊಂಡಿದ್ದಾರೆ.

Naka tail kami ke kuya Danilo medyo malayo kasi baka matakot si Digong (dog)

Posted by Misis Faith L Revilla on Wednesday, July 11, 2018

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv