ದೇವಸ್ಥಾನಕ್ಕೆ ಹೋಗಿ ಭಜನೆಗೆ ದನಿಗೂಡಿಸಿದ ನಾಯಿ..!

ಪುಣೆ: ಈ ಜಗತ್ತಿನ ಅದ್ಭುತ ಸೃಷ್ಟಿಗಳಲ್ಲಿ ನಾಯಿಗಳು ಕೂಡ ಒಂದು. ನಾಯಿಗಳು ತಮ್ಮ ನಿಯತ್ತಿನಿಂದ ಎಂಥ ಕಲ್ಲು ಹೃದಯವನ್ನೂ ಕರಗಿಸಿಬಿಡುತ್ತವೆ. ಹಾಗೇ ಇನ್ನೂ ಕೆಲವೊಮ್ಮೆ ತಮ್ಮ ವರ್ತನೆಗಳಿಂದ ಅಚ್ಚರಿ ಮೂಡಿಸುತ್ತವೆ. ಪುಣೆಯಲ್ಲಿ ನಾಯಿಯೊಂದು ದೇವಸ್ಥಾನದ ಭಜನೆಯಲ್ಲಿ ಭಾಗಿಯಾಗಿ ಜನರ ಹುಬ್ಬೇರಿಸಿದೆ.

ದೇವಸ್ಥಾನದಲ್ಲಿ ಕೀರ್ತನೆಗಳನ್ನ ಹಾಡುತ್ತಿದದವರೊಂದಿಗೆ ನಾಯಿ ಕೂಡ ದನಿಗೂಡಿಸಿ ಆಶ್ಚರ್ಯ ಮೂಡಿಸಿದೆ. ತನ್ನ ಸ್ನೇಹಿತರೊಬ್ಬರ ನಾಯಿ ಹೀಗೆ ಭಜನೆಯಲ್ಲಿ ಪಾಲ್ಗೊಂಡ ವಿಡಿಯೋವನ್ನ ಸುಷ್ಮಾ ಎಂಬವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇದು ನನ್ನ ಸ್ನೇಹಿತರೊಬ್ಬರ ಫ್ಯಾಕ್ಟರಿಯಲ್ಲಿರೋ ನಾಯಿ. ಪ್ರತಿ ಗುರುವಾರ ದೇವಸ್ಥಾನಕ್ಕೆ ಹೋಗಿ ಕೀರ್ತನೆಯಲ್ಲಿ ಭಾಗಿಯಾಗುತ್ತದೆ. ನಂತರ ಪ್ರಸಾದ ತಿಂದು ವಾಪಸ್​ ಬರುತ್ತದೆ. ಇದು ಪ್ರತಿ ಗುರುವಾರ ನಡೆಯುತ್ತದೆ ಅಂತ ಸುಷ್ಮಾ ಹೇಳಿದ್ದಾರೆ.

ನಾಯಿ, ಭಕ್ತರ ಜೊತೆ ಕೀರ್ತನೆಗೆ ದನಿಗೂಡಿಸೋದನ್ನ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, 5 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ. ವಿಡಿಯೋ ನೋಡಿದವರು ನಾಯಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್​ ಮಾಡಿದ್ದಾರೆ.