ಲೈಂಗಿಕ ಸಂತೃಪ್ತಿಯಲ್ಲಿ ‘ಗಾತ್ರ’ದ ಪಾತ್ರ ನಿಜಕ್ಕೂ ಇದೆಯಾ..?

ಲೈಂಗಿಕತೆ ಬದುಕಿನ ಒಂದು ಭಾಗ. ತರುಣ, ತರುಣಿಯರಲ್ಲಿ ಸುಪ್ತವಾಗಿ ಸದಾ ಚಿಮ್ಮುವ ಒಂದು ಮಧುರ ಆಕಾಂಕ್ಷೆ. ಸೆಕ್ಸ್ ಎಂಬುದು ಕೇವಲ ಮಕ್ಕಳನ್ನು ಹುಟ್ಟಿಸುವ ಒಂದು ಕ್ರಿಯೆಯಲ್ಲ. ಅದು ಎರಡು ದೇಹಗಳು ಬೆಸೆದುಕೊಂಡು ಕಳೆದು ಹೋಗುವ ಧ್ಯಾನಸ್ಥಿತಿ. ವಿಪರ್ಯಾಸ ಎಂದರೇ ಬದುಕಿನ ಒಂದು ಭಾಗವಾದ ಲೈಂಗಿಕತೆಯ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಅವುಗಳಲ್ಲಿ ಪುರುಷಾಂಗದ ಗಾತ್ರವು ಪ್ರಮುಖವಾದದ್ದು.
ಪುರುಷಾಂಗದ ಗಾತ್ರದ ಬಗ್ಗೆ ಗಂಡು ಮತ್ತು ಹೆಣ್ಣು ಇಬ್ಬರಲ್ಲಿಯೂ ತಪ್ಪು ಕಲ್ಪನೆಗಳ ಗುಚ್ಛವೇ ಇದೆ. ಪುರುಷಾಂಗದ ಗಾತ್ರವೇ ಸೆಕ್ಸ್​ನಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ. ಇಲ್ಲವಾದಲ್ಲಿ ಹೆಣ್ಣಿಗೆ ಸಂತೃಪ್ತಿ ದೊರಕುವುದಿಲ್ಲ ಎನ್ನುವ ತಪ್ಪು ಗ್ರಹಿಕೆ ಯುವ ಸಮುದಾಯದಲ್ಲಿದೆ. ಅದು ಅಲ್ಲದೇ ಲಂಪಟ ಸಾಹಿತ್ಯಗಳು ಕೂಡ ಪುರುಷಾಂಗದ ಗಾತ್ರವೇ ಲೈಂಗಿಕ ಬದುಕಿನಲ್ಲಿ ದೊಡ್ಡ ಪಾತ್ರವಹಿಸುತ್ತದೆ ಎನ್ನುವಂತೆ ರಂಜಿಸಿ ಬರೆಯುತ್ತಾರೆ.

‘ಗಾತ್ರ’ದ ಪಾತ್ರ ತುಂಬಾ ಕಡಿಮೆ
ಲೈಂಗಿಕ ತಜ್ಞರ ಪ್ರಕಾರ ಪುರುಷಾಂಗದ ಗಾತ್ರ ಸೆಕ್ಸ್​ನಲ್ಲಿ ಪ್ರಾಮುಖ್ಯತೆ ಪಡೆಯುವುದಿಲ್ಲ. ಮಿಲನದ ಗುಣಮಟ್ಟದ ಮೇಲೆ ನಿಮ್ಮ ಲೈಂಗಿಕ ಸಂತೃಪ್ತಿ ಅಡಗಿರುತ್ತದೆ ಎನ್ನುತ್ತಾರೆ ತಜ್ಞರು. ಜೋಡಿಗಳು ಹೆಚ್ಚು ಕ್ರಿಯಾತ್ಮಕವಾಗಿ ಸೆಕ್ಸ್​ನಲ್ಲಿ ಪಾಲ್ಗೊಳ್ಳುವುದರಿಲ್ಲಿ ಸಂತೃಪ್ತಿ ಭಾವ ಅಡಗಿದೆಯೇ ಹೊರತು ಗಾತ್ರ ಒಂದು ವಿಷಯವೇ ಅಲ್ಲ ಎಂದು ಹೇಳುತ್ತಾರೆ. ಅಲ್ಲದೇ, ಮಹಿಳೆಯ ಜಿ-ಸ್ಪಾಟ್​ ಎರಡು ಇಂಚು ಆಳದಲ್ಲಿ ಇದೆ ಮಿಲನದ ವೇಳೆ ಪುರುಷಾಂಗದ ಮುಂಬಾಗ ಮಹಿಳೆಯ ಜಿ-ಸ್ಪಾಟ್​ಗೆ ತಾಗಿ ಬಂದರೇ ಹೆಣ್ಣು ಸುಖಿ. ಇದರಾಚೆ ಯಾವುದೇ ಸಂತೃಪ್ತಿಗಳು ಇಲ್ಲ. ಸಂತೃಪ್ತಿಯಿರುವುದು ನಿಮ್ಮ ಸಮಾಗಮದ ಗುಣಮಟ್ಟದ ಮೇಲೆ ಹಾಗೂ ಬಳಸುವ ನೂತನ ಭಂಗಿಗಳ ಮೇಲೆ ಎನ್ನುತ್ತಾರೆ ತಜ್ಞರು.

ದೇಹಕ್ಕಿಂತ, ಮನಸ್ಸಿನ ಮಿಲನವೂ ಮುಖ್ಯ..!
ಲೈಂಗಿಕ ತಜ್ಞರು ಹೇಳುವಂತೆ, ಮಿಲನ ಮಹೋತ್ವದಲ್ಲಿ ಗಾತ್ರಕ್ಕಿಂತ, ಮಾನಸಿಕ ಪಾತ್ರ ಬಹುಮುಖ್ಯ. ತನ್ಮಯತೆ, ಆಳವಾದ ಪ್ರೀತಿ, ಸಮಾಧಾನ ಚಿತ್ತ, ಉತ್ತಮ ಮೂಡ್ ನೀಡುವಂಥ ಪ್ರದೇಶ, ಪರಸ್ಪರರ ಮೇಲೆ ಸಂಪೂರ್ಣ ನಂಬಿಕೆ ಹಾಗೂ ಪಾಲ್ಗೊಳ್ಳುವಿಗೆ ಅತಿ ಮುಖ್ಯ ಎನ್ನಲಾಗುತ್ತೆ. ನೇರವಾದ ಸಮ್ಮಿಲನಕ್ಕಿಂತ ಮೊದಲು, ಮಾಡು ಚೇಷ್ಟೆಗಳು, ಆಡುವ ಆಟಗಳು ಲೈಂಗಿಕ ತೃಪ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತೆ. ಹೀಗಾಗಿ, ಬೇರೆಲ್ಲ ಚಿಂತೆ ಬಿಟ್ಟು.. ಸೈಜ್​ ಬಗ್ಗೆ ತಲೆ ಕೆಡಿಸಿಕೊಳ್ಳದೆ.. ಜೋಡಿಗಳು ನಿಮ್ಮ ಲೈಂಗಿಕ ಜೀವನವನ್ನು ಎಂಜಾಯ್ ಮಾಡಿ..!!!

ವಿಶೇಷ ಬರಹ: G.K

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕೆ ಸಂಪರ್ಕಿಸಿ: contact@firstnews.tv