ಆಪರೇಷನ್ ಸಕ್ಸಸ್​​: ಹೊಟ್ಟೆಯಲ್ಲಿದ್ದದ್ದು ಬ್ಲೇಡ್, ಪೆನ್ಸಿಲ್, ಕೀ, ಸಿಮ್ ಕಾರ್ಡ್​​..!

ಚೆನ್ನೈ: ಭಾರತೀಯ ಮೂಲದ ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿ ಸುಮಾರು 40 ಲೋಹದ ವಸ್ತುಗಳು ಪತ್ತೆಯಾಗಿವೆ. ಕೀ, ನಾಣ್ಯ, ಸಿಮ್ ಕಾರ್ಡ್‌ ಸೇರಿದಂತೆ ಹಲವು ವಸ್ತುಗಳು ಹೊಟ್ಟೆಯೊಳಗೆ ಇದ್ದವು. ಇದನ್ನ ನೋಡಿದ ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆ ವೈದ್ಯರು ಬೆಚ್ಚಿ ಬಿದ್ದಿದ್ದಾರೆ.

ಆ ವ್ಯಕ್ತಿಯ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಆಪರೇಷನ್ ಮಾಡಿ ಹೊರ ತೆಗೆದಿದ್ದಾರೆ. 52 ವಯಸ್ಸಿನ ಜಯಕುಮಾರ್ ಅನ್ನೋರ ಹೊಟ್ಟೆಯಲ್ಲಿ ಪೆನ್ಸಿಲ್, ಶಾರ್ಪನರ್ ಹಾಗೂ ಬ್ಲೇಡ್‌ ಅಲ್ಲದೇ ಹೆಚ್ಚಿನ ವಸ್ತುಗಳ ಜತೆಗೆ ಸಂಗ್ರಹಣೆಯೊಳಗೆ ಅಂಟಿಕೊಂಡಿದ್ದ ಮ್ಯಾಗ್ನೇಟ್ ಅನ್ನ ವೈದ್ಯರು ಆಪರೇಷನ್ ಮಾಡಿ ಹೊರ ತೆಗೆದಿದ್ದಾರೆ. ವಿಶೇಷ ಅಂದ್ರೆ ಅಪರೇಷನ್ ಮಾಡಲು ವೈದ್ಯರು ಕೇವಲ 45 ನಿಮಿಷಗಳು ಮಾತ್ರ ತೆಗೆದುಕೊಂಡಿದ್ದಾರೆ.

ಚೈನ್ನೈ ವೈದ್ಯರು ಹೇಳುವಂತೆ ವ್ಯಕ್ತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. ಹಾಗಾಗಿ ಒಂದು ವೇಳೆ ಆತನಿಗೆ ಆಪರೇಷನ್ ಮಾಡಿಲ್ಲ ಅಂತಾದ್ರೆ ಆತ ಸಾವು ಸಂಭವಿಸುವ ಚಾನ್ಸಸ್‌ ಇತ್ತು ಎಂದಿದ್ದಾರೆ. ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯ ವೈದ್ಯ ಎ.ಆರ್ ವೆಂಕಟೇಶ್ವರನ್ ಹೇಳುವಂತೆ, ವೈದ್ಯರು ಎರಡು ದಿನ ತುಂಬಾ ಕೇರ್‌ಫುಲ್ ಆಗಿ 40 ವಸ್ತುಗಳನ್ನು ತೆಗೆದುಹಾಕಲು ಗ್ಯಾಸ್ಟ್ರೋಸ್ಕೋಪಿ ಪ್ರಕ್ರಿಯೆಯನ್ನ ಕೈಗೊಂಡರು. ಜಯಕುಮಾರ್ ಹೊಟ್ಟೆಯಲ್ಲಿದ್ದ ಸುಮಾರು 22 ಮೇಟಲ್ ವಸ್ತುಗಳನ್ನು ತೆಗೆದು ಹಾಕಲಾಯಿತು. ಮತ್ತೊಂದು ದಿನ ಸುಮಾರು 18 ವಸ್ತಗಳನ್ನು ತೆಗೆಯಲಾಯಿತು ಎಂದಿದ್ದಾರೆ.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಎಮ್‌ಆರ್‌ಐ ಟೆಸ್ಟ್ ಮಾಡಿಸಲಾಯ್ತು. ಆಗ ಮೊದಲ ಬಾರಿಗೆ ಆ ವಸ್ತುಗಳನ್ನು ಗುರುತಿಸಲಾಯಿತು. ಮೂರು ವರ್ಷಗಳವರೆಗೆ ಆ ವ್ಯಕ್ತಿ ಟ್ರಿಟ್ಮೆಂಟ್ ಪಡೆದಿದ್ದ. ಬಳಿಕ ಆ ವ್ಯಕ್ತಿಗೆ ಕಿಬ್ಬೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಗ ಸಿಟಿ ಸ್ಕ್ಯಾನ್ ಮಾಡಲಾಯ್ತು. ಈ ವೇಳೆ ಆತನ ಹೊಟ್ಟೆಯಲ್ಲಿ ಅನೇಕ ಮೆಟಲ್ ವಸ್ತುಗಳು ಇದಿದ್ದು ಪತ್ತೆಯಾಗಿತ್ತು. ಬಳಿಕ ಫೆಬ್ರವರಿಯಲ್ಲಿ ಆತ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು, ಜಯಕುಮಾರ್‌ ಸಿಕ್ಕ ಸಿಕ್ಕ ವಸ್ತುಗಳ ನುಂಗುವ ಅಭ್ಯಾಸ ಅವರ ಕುಟುಂಬಕ್ಕೆ ಗೊತ್ತಿರಲಿಲ್ಲವಂತೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv