ಕಣ್ಣೊಳಗೆ ಇದ್ದವು ಜೀವಂತ ಜೇನುನೊಣಗಳು..!

ತೈವಾನ್​​​​, ಚೀನಾ: ಸಾಮಾನ್ಯವಾಗಿ ನಮಗೆ-ನಿಮಗೆ ಕಣ್ಣೊಳಗೆ ಒಂದು ಸಣ್ಣ ಧೂಳಿನ ಕಣ ಬಿದ್ರೂ ತಡಕ್ಕೋಳ್ಳೋಕ್ಕಾಗಲ್ಲ. ಇನ್ನು ಜೇನು ನೊಣ ಹೋದ್ರೆ..? ಮುಗಿದೇ ಹೋಯ್ತು. ನಿಂತಲ್ಲಿ ನಿಲ್ಲದೇ, ಕೂತಲ್ಲಿ ಕೂರದೇ ಜೀವಾನೇ ಹೋಯ್ತು ಅನ್ನೋ ರೀತಿ ಜಿಗಿದಾಡ್ತೇವೆ. ಆದ್ರೆ, ಚೀನಾದ ತೈವಾನ್​ನಲ್ಲಿ ಮಹಿಳೆಯೊಬ್ಬಳ ಕಣ್ಣಲ್ಲಿ ಬರೋಬ್ಬರಿ ನಾಲ್ಕು ಜೇನು ನೊಣಗಳು ಜೀವಂತವಾಗೇ ಸಿಕ್ಕಿದ್ದು, ಇಡೀ ವೈದ್ಯಲೋಕವನ್ನೇ ಕಕ್ಕಾಬಿಕ್ಕಿಯಾಗಿಸಿದ್ದಾಳೆ.
ಮಹಿಳೆಯೊಬ್ಬಳು ಕೆಲ ದಿನಗಳ ಹಿಂದೆ ಕಣ್ಣುರಿ ಅಂತೇಳಿ ಫೋಯಯಿನ್​ ವಿಶ್ವವಿದ್ಯಾಲಯ ಆಸ್ಪತ್ರೆಗೆ ಹೋಗಿದ್ಲು. ಆಕೆ ಪರಿಸ್ಥಿತಿ ನೋಡಿದ ವೈದ್ಯರು, ಇದು ನಾರ್ಮಲ್​ ಕೇಸ್​ ಅಂತ ಎಲ್ಲ ತಪಾಸಣೆ​ ಮಾಡಿದ್ದಾರೆ. ಹೀಗೆ ಚೆಕಪ್​ ಮಾಡುವ ವೇಳೆ ಮಹಿಳೆ ಕಣ್ಣಿನಿಂದ ನೀರು ಜಿನುಗುವುದನ್ನ ಗಮನಿಸಿದ ವೈದ್ಯರು, ಮೈಕ್ರೋಸ್ಕೋಪ್​ ಮೂಲಕ ತಪಾಸಣೆ ನಡೆಸಿದ್ದಾರೆ. ಈ ವೇಳೆ ಮಹಿಳೆ ಕಣ್ಣೊಳಗೆ ಜೀವಂತ ನಾಲ್ಕು ಜೇನುನೊಣಗಳು ಇರೋದು ಗೊತ್ತಾಗಿದೆ. ಕೊನೆಗೂ ಹಾಗೂ-ಹೀಗೂ ಕಣ್ಣೊಳಗೆ ಬರೀ ಕಣ್ಣೀರು ಕುಡಿದುಕೊಂಡಿದ್ದ ಜೇನುಹುಳಗಳನ್ನ ಹೊರ ತೆಗೆಯಲಾಗಿದ್ದು, ಇದು ವಿಶ್ವದಲ್ಲೇ ಮೊದಲ ಘಟನೆ ಅಂತ ವೈದ್ಯರ ತಂಡ ಅಚ್ಚರಿ ವ್ಯಕ್ತಪಡಿಸಿದೆ. ಪರ್ವತ ಪ್ರದೇಶದಲ್ಲಿ ಕೆಲಸ ಮಾಡುವಾಗ ಮಹಿಳೆಗೆ, ಕಣ್ಣಿನ ಒಳಗೆ ಏನೋ ಹೋದಂತೆ ಭಾಸವಾಗಿದೆ. ಬಳಿಕ ಇದು ಯಾವುದೋ ಕಸ ಇರಬಹುದೆಂದು ತಿಳಿದು, ಕಣ್ಣನ್ನ ತೊಳೆದಿದ್ರಂತೆ. ಅಂದಿನಿಂದ ಕಣ್ಣೊಳಗೆ ಇದ್ದ ಜೇನು ನೊಣಗಳು ಇದೀಗ ಹೊರಬಂದಿದ್ದು, ಮಹಿಳೆ ನಿಟ್ಟುಸಿರು ಬಿಟ್ಟಿದ್ದಾಳೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv