ಅಭಿ ಸಿನಿ ಬಂಡಿಗೂ ಹೆಗಲು ಕೊಡ್ತಾರಾ ಜೋಡೆತ್ತುಗಳು..?

ರೆಬೆಲ್​ ಸ್ಟಾರ್​ ಅಂಬರೀಶ್​ ನಂತ್ರ ಸ್ಯಾಂಡಲ್​​ವುಡ್​ಗೆ ಯಾರು ದಿಕ್ಕು ಅಂತ ಯೋಚಿಸಿದೋರಿಗಿಂತ ಹೆಚ್ಚು, ಅಂಬರೀಶ್​ ಕುಟುಂಬಕ್ಕೆ ಯಾರು ಸಪೋರ್ಟ್​ ಅಂತ ಯೋಚಿಸಿದವರು. ಆದ್ರೆ ಅಂಬರೀಶ್​ ಇಲ್ಲ ಅನ್ನೋ ಕೊರಗು ದೂರ ಮಾಡಿ ಅವ್ರ ಕುಟುಂಬಕ್ಕೆ ಕಾವಲಾಗಿ ನಿಂತ ಜೋಡೆತ್ತು ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಹಾಗೂ ರಾಕಿಂಗ್​ ಸ್ಟಾರ್​ ಯಶ್​. ಮಂಡ್ಯ ಎಲೆಕ್ಷನ್​ಗೂ ಮೊದಲೆ ಹೇಳಿದಂತೆ ಎಲೆಕ್ಷನ್​ ಪ್ರಚಾರದಲ್ಲಿ ನಿರಂತರವಾಗಿ ಪ್ರಚಾರದಲ್ಲಿ ಭಾಗಿಯಾದ್ರು. ಸಿನಿಮಾ ದವ್ರು, ಹಾಗೆ ಹೀಗೆ ಅಂತ ಬಾಯಿ ಬಡ್ಕೊಳ್ತಿದ್ದವರು ಬಾಯಿಗೆ ಬೀಗ ಹಾಕಿದ್ರು. ಅಂಬರೀಶ್​ ಪುತ್ರ ಅಭಿಯ ಸಂಗಡ ಸೇರಿ, ತಾಯಿ ಸ್ವರೂಪರಾದ ಸುಮಲತಾ ಪರ, ಯಾರೂ ಅಂದಾಜು ಕೂಡ ಮಾಡಲಾಗದ ರೀತಿಯಲ್ಲಿ ಅಬ್ಬರದ ಪ್ರಚಾರ ಮಾಡಿದ್ರು. ಈಗ ಎಲೆಕ್ಷನ್​ ಮುಗಿದಿದೆ. ಸುಮಲತಾನೇ ಗೆಲ್ತಾರೆ ಅನ್ನೋ ಮಾತು ಎಲ್ಲೆಡೆ ಕೇಳಿ ಬರ್ತಾ ಇದೆ. ಈ ನಡುವೆ ಅಭಿ ಸಿನಿಲೈಫ್​ ಜರ್ನಿಯ ಶುರುವಿಗೂ ಯಶ್​ ಹಾಗೂ ದರ್ಶನ್​ ಬೆನ್ನಿಗೆ ನಿಲ್ತಾರೆ ಅನ್ನೋ ಲೆಕ್ಕಾಚಾರ ಶುರುವಾಗಿದೆ.
ಅಭಿಗಾಗಿ ದೊಡ್ಡಣ್ಣ ದರ್ಶನ್​ ನಟಿಸಿದ್ರು, ಚಿಕ್ಕಣ್ಣ ಯಶ್​​..?
ಈಗಾಗ್ಲೆ ಅಭಿಶೇಕ್​ ಅಭಿನಯದ ಚೊಚ್ಚಲ ಸಿನಿಮಾ ಅಮರ್​ ಶೂಟಿಂಗ್​ ಮುಗಿಸಿ, ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ. ಇಷ್ಟು ದಿನ ಎಲೆಕ್ಷನ್​ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಅಭಿ, ತಮ್ಮ ಚೊಚ್ಚಲ ಸಿನಿಮಾದ ಪ್ರಚಾರದ ಪ್ಲಾನಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ರಚಾರದಲ್ಲೂ ದರ್ಶನ್​ ಹಾಗೂ ಯಶ್​ ಪಾಲ್ಗೊಳ್ಳುವುದು ಬಹುತೇಕ ಕನ್​ಫರ್ಮ್​. ಈಗಾಗ್ಲೆ ದರ್ಶನ್​ ಅಭಿ ಚೊಚ್ಚಲ ಸಿನಿಮಾ ಅಮರ್​ನಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಸೀನ್ ಹಾಗೂ ಒಂದು ಹಾಡಿನಲ್ಲಿ ನಟಿಸಿದ್ದಾರೆ. ಇನ್ನೂ ಯಶ್​ ಕೂಡ ಅಮರ್​ ಸಿನಿಮಾದ ಭಾಗವಾಗಲಿದ್ದಾರೆ ಆದ್ರೆ ಹೇಗೆ ಅನ್ನೋದನ್ನ ಸಿನಿಮಾ ಟೀಮ್​ ಇನ್ನೂ ರಿವೀಲ್​ ಮಾಡಿಲ್ಲ. ಆದ್ರೆ ಅಭಿ ದೊಡ್ಡ ಅಣ್ಣ ದರ್ಶನ್​ ಸಿನಿಮಾದಲ್ಲಿ ನಟಿಸಿರೋ ಹಾಗೆ, ಚಿಕ್ಕ ಅಣ್ಣ ಯಶ್​ ಕೂಡ ಸಿನಿಮಾದ ಒಂದು ಭಾಗವಾಗೋದ್ರಲ್ಲಿ ಡೌಟೇ ಇಲ್ಲ..