ಸಚಿವ ಡಿಕೆಶಿ ಔತಣ ಕೂಟದಲ್ಲಿ ಗೂಳಿಹಟ್ಟಿ ಶೇಖರ್‌ ಪ್ರತ್ಯಕ್ಷ..

ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಔತಣಕೂಟ ಏರ್ಪಡಿಸಿದ ಬೆನ್ನಲ್ಲೇ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕೂಡ ನಿನ್ನೆ ತಾಜ್​ ವೆಸ್ಟ್​ಲ್ಯಾಂಡ್​ ಹೋಟೆಲ್​ನಲ್ಲಿ ಭರ್ಜರಿ ಔತಣಕೂಟ ಆಯೋಜಿಸಿದ್ರು. ಅಚ್ಚರಿ ಅಂದ್ರೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​ ಕೂಡ ಔತಣಕೂಟದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ಶಾಸಕರನ್ನು ಸೆಳೆಯಲು ಔತಣವನ್ನು ಏರ್ಪಡಿಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಸಿದ್ದರಾಮಯ್ಯ ಪ್ರಭಾವ ಕಡಿಮೆ ಮಾಡಲು ಡಿಕೆಶಿ ಹಾಗೂ ಪರಂ ಪ್ಲಾನ್ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕೂಡ ಇವತ್ತು ಭಾರೀ ಭೋಜನದ ಕೂಟ ಏರ್ಪಡಿಸಿದ್ದಾರೆ. ಹೀಗೆ ಒಬ್ಬರಾದ ನಂತರ ಒಬ್ಬರು ಭೋಜನಕೂಟ ಆಯೋಜಿಸುತ್ತಿರುವುದು ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಅಡ್ಡಿಯಾಗುತ್ತಾರೆ ಎನ್ನುವ ಆತಂಕ ಮತ್ತು ಶಾಸಕರನ್ನು ತಮ್ಮ ಟೀಂನತ್ತ ಸೆಳೆಯೋ ತಂತ್ರ ಅಂತ ರಾಜ್ಯ ಕಾಂಗ್ರೆಸ್ ಅಂಗಳದಲ್ಲೇ ಗುಸುಗುಸು ಕೇಳಿಬರುತ್ತಿದೆ.