ಡಿಕೆಎಸ್​ ಹೇಳಿಕೆ: ಎಂ.ಬಿ. ಪಾಟೀಲ್​ ವಿರುದ್ಧ ಸಿಡಿದ ಶಾಮನೂರು ಶಿವಶಂಕರಪ್ಪ

ದಾವಣಗೆರೆ: ‘ಶಾಸಕ ಎಂ.ಬಿ. ಪಾಟೀಲ್ ಮತ್ತು ವಿನಯ್ ಕುಲಕರ್ಣಿ ಅವರ ಮಾತು ಕೇಳಿಕೊಂಡು ಸಿದ್ದರಾಮಯ್ಯ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿದ್ರು. ಅವರ ಮಾತು ಕೇಳಿ ಸಮಾಜ ಒಡೆದರು’ ಎಂದು ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್​ ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ.

ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಸರ್ಕಾರ ಜನಗಣತಿ ಮಾಡಿ ಸಮಾಜ ಒಡೆಯಲು ನೋಡಿತು. 110 ವರ್ಷ ಸುಮ್ಮನಿದ್ದು ಈಗ ಎಂ.ಬಿ ಪಾಟೀಲ್, ವಿನಯ್ ಅವರು ಜೋರ್ ಮಾಡ್ತಿದಾರೆ. ಇವರೇನು ಸುಪ್ರೀಮಾ..? ಸಚಿವ ಡಿ.ಕೆ. ಶಿವಕುಮಾರ್​ ವಿರುದ್ಧ ದೂರು ಕೊಡ್ತೀವಿ ಅಂದಿದ್ದಾರೆ. ಆದ್ರೆ ನಾವೂ ಎಂ.ಬಿ ಪಾಟೀಲ್, ವಿನಯ್ ವಿರುದ್ಧ ಪಕ್ಷಕ್ಕೆ ದೂರು ಕೊಡ್ತೀವಿ. ಸಮಾಜ ಒಡೆಯುವ ಕೆಲಸ ತಪ್ಪು, ಅದನ್ನ ಬಿಡಬೇಕು. ಹಣ, ಗರ್ವ ಬಿಟ್ಟು ಸರಿಯಾಗಿ ಮಾತನಾಡಲಿ. ಸಮಾಜ ಒಂದಾಗಲು ಸಹಕರಿಸಲಿ ಎಂದು ಶಾಮನೂರು ವಾಗ್ದಾಳಿ ನಡೆಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv