ರಾಮನಗರದಲ್ಲಿ ಜೆಡಿಎಸ್‌ ಅಭ್ಯರ್ಥಿ ಬೆಂಬಲಿಸಿ: ಕೈ ನಾಯಕರಿಗೆ ಡಿಕೆಶಿ ಖಡಕ್‌ ಸೂಚನೆ

ರಾಮನಗರ: ರಾಮನಗರ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಜೆಡಿಎಸ್​ ಅಭ್ಯರ್ಥಿಯನ್ನು ಬೆಂಬಲಿಸಲಿದೆ. ಈ ಸಂಬಂಧ ಮೈತ್ರಿ ಸಹ ಆಗಿದೆ. ಆದರೆ ಜಿಲ್ಲೆಯ ಕೆಲ ಕಾಂಗ್ರೆಸ್​ ನಾಯಕರು ಜೆಡಿಎಸ್​ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಒತ್ತಾಯಕ್ಕೆ ಸಚಿವ ಡಿ.ಕೆ ಶಿವಕುಮಾರ್​ ಕೆರಳಿ ಕೆಂಡಾಮಂಡಲರಾಗಿದ್ದಾರೆ.

ಹೌದು ಜಿಲ್ಲೆಯ ನಾಯಕರಾದ ಸಿಎಂ ಲಿಂಗಪ್ಪ, ಇಕ್ಬಾಲ್ ಹುಸೇನ್ ಸೇರಿದಂತೆ ಹಲ ನಾಯಕರು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್​ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಒತ್ತಾಯಿಸಿದ್ದಾರೆ. ಇದರಿಂದ ಕೆರಳಿ ಕೆಂಡಾಮಂಡಲರಾದ ಡಿ.ಕೆ ಶಿವಕುಮಾರ್​ ತಲೆಯನ್ನ ಸುಮ್ಮನೆ ಬಂಡೆಗೆ ಚಚ್ಚಿಕೊಳ್ಳಬೇಡಿ. ಇದರಿಂದ ಏನು ಪ್ರಯೋಜನ ಆಗುವುದಿಲ್ಲ. ಪಕ್ಷದ ತೀರ್ಮಾನದ ವಿರುದ್ಧ ಯಾರೂ ಹೋಗಬೇಡಿ ಎಂದು ಹೇಳಿದ್ದಾರೆ. ಅಲ್ಲದೇ ನಾನು ಪಕ್ಷಕ್ಕಾಗಿ ಎಷ್ಟು ತ್ಯಾಗ ಮಾಡಿಲ್ಲ ಹೇಳಿ? ದೇವೇಗೌಡರ ಕುಟುಂಬದ ವಿರುದ್ಧ ನನ್ನಷ್ಟು ಹೋರಾಟ ಮಾಡಿದವರು ಯಾರಿದ್ದಾರೆ? ಈಗ ಅನಿವಾರ್ಯವಾಗಿ ಶರಣಾಗಿದ್ದೇನೆ. ಸಮ್ಮಿಶ್ರ ಸರ್ಕಾರ ಉಳಸಿಕೊಳ್ಳಬೇಕಾದ ಜವಾಬ್ದಾರಿ ನನ್ನ ಮೇಲಿದೆ. ಈ ಬಾರಿ ನೀವೆಲ್ಲರೂ ನನ್ನ ಜೊತೆ ನಿಂತುಕೊಳ್ಳಿ. ಜೆಡಿಎಸ್‌ ಅಭ್ಯರ್ಥಿಯನ್ನ ನಾವು ಬೆಂಬಲಿಸಬೇಕಾಗಿದೆ. ಇದು ನನ್ನ ತೀರ್ಮಾನವಲ್ಲ, ಬದಲಾಗಿ ಹೈಕಮಾಂಡ್ ನಿರ್ಧಾರ ಎಂದು ನಾಯಕರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು ನಾಯಕರು ಡಿಕೆಶಿ ಮಾತಿಗೆ ಮರು ಮಾತನಾಡದೆ ತೆರಳಿರುವ ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv