ಕರಾವಳಿ ಸಂಸದರು ನುಡಿದಂತೆ ನಡೆಯಲಿಲ್ಲ. ಅಚ್ಛೆ ದಿನ ಬರಲಿಲ್ಲ: ಸಚಿವ ಡಿಕೆ. ಶಿವಕುಮಾರ್

ಮಂಗಳೂರು: 28 ವರ್ಷದಿಂದ ನಮ್ಮ ಎಂಪಿ ಇಲ್ಲಿ ಇಲ್ಲ.  ರಾಜ್ಯದಲ್ಲಿ ಮಂಗಳೂರು ‌ದೊಡ್ಡ ಕೇಂದ್ರ. ನಳಿನ್ ಕುಮಾರ್ ಕಟೀಲ್ ಜಿಲ್ಲೆಗೆ ಏನು ನೀಡಿದ್ದಾರೆ ?. ಇಲ್ಲಿನ ಜನ ಕೆಲಸಕ್ಕಾಗಿ ಬೇರೆ ಕಡೆ ವಲಸೆ ಹೋಗುವಂತಾಗಿದೆ. ಇನ್ನು ಕರಾವಳಿ ಸಂಸದರು ವಿಜಯ ಬ್ಯಾಂಕ್ ವಿಲೀನದ ಬಗ್ಗೆ ಮಾತನಾಡಲಿಲ್ಲ. ಇಲ್ಲಿನ ಸಂಸದರು ನುಡಿದಂತೆ ನಡೆಯಲಿಲ್ಲ, ಅಚ್ಛೆ ದಿನ ಬರಲಿಲ್ಲ ಎಂದು ಸಚಿವ ಡಿಕೆ. ಶಿವಕುಮಾರ್​ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಮಂಡ್ಯ ಚುನಾವಣೆ ಕುರಿತು ಮಾತನಾಡಿ, ಇಲ್ಲಿ ವ್ಯಕ್ತಿ ಪೂಜೆ ಮಾಡಲ್ಲ, ಪಕ್ಷ ಮುಖ್ಯ. 100% ಇಲ್ಲಿ ಒಮ್ಮತ ಬಾರದೇ ಇದ್ದರೂ 90% ಒಮ್ಮತ ಇದೆ. ಮೈತ್ರಿಯಿಂದ ಕಾಂಗ್ರೆಸ್ ಒಳ್ಳೆಯದಾಗಿದೆ. ಭಿನ್ನಾಭಿಪ್ರಾಯ ಇರಬಹುದು ಆದರೆ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ರು.

ಈ ಬಾರಿಯ ಚುನಾವಣೆ ಲಿಂಗಾಯತರ ಮೇಲೆ ನಡೆಯುವ ಚುನಾವಣೆಯಲ್ಲ. ದೇಶದ ಆಡಳಿತ ವೈಫಲ್ಯದ ವಿರುದ್ಧ ನಡೆಯುವ ಚುನಾವಣೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಮ್ಮ ಅಸ್ಮಿತೆ. ವೈಚಾರಿಕ ಭಿನ್ನತೆಗಳನ್ನ ನಾವು ಬಗೆಹರಿಸಿಕೊಳ್ಳುತ್ತೇವೆ. ಲಿಂಗಾಯತ ಧರ್ಮದ ವಿಚಾರ ಕಾಂಗ್ರೆಸ್​ಗೆ ಸಂಬಂಧವಿಲ್ಲ ಎಂದು ಎಂ.ಬಿ ಪಾಟೀಲ್​ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಪಾಟೀಲ್​ಗೆ ಟಾಂಗ್​ ನೀಡಿದ್ರು.

ಇದನ್ನು ಓದಿ: ‘ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಚುನಾವಣೆ ಮುಗಿದ ಮೇಲೆ ಉತ್ತರ ಕೊಡ್ತೀನಿ’ 

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv