ಸತೀಶ್ ಜಾರಕಿಹೊಳಿ ಸಾಹುಕಾರರು, ನಾವು ಪ್ರಜೆಗಳು :ಡಿ.ಕೆ.ಶಿವಕುಮಾರ್

ಬೆಂಗಳೂರು: ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ಮೇ 19 ರಂದು ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೊನ್ನೆ ಕಾಂಗ್ರೆಸ್​ ಹೈಕಮಾಂಡ್​ ಕುಂದಗೋಳ ಹಾಗೂ ಚಿಂಚೋಳಿ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನ ನೇಮಕ ಮಾಡಿತ್ತು. ಅದ್ರಂತೆ ಸಚಿವ ಡಿ.ಕೆ.ಶಿವಕುಮಾರ್ ಅವ್ರನ್ನ ಕುಂದಗೋಳ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಉಸ್ತುವಾರಿ ನೇಮಕದ ವೇಳೆ ಉತ್ತರ ಕರ್ನಾಟಕ ಭಾಗದ ನಾಯಕರ ಸಲಹೆ ತೆಗೆದುಕೊಳ್ಳದೇ ಕಾಂಗ್ರೆಸ್​ ನೇಮಕ ಮಾಡಿದೆ ಎನ್ನಲಾಗಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಸತೀಶ್ ಜಾರಕಿಹೊಳಿ, ಇಲ್ಲಿರುವ ನಾವು ನಾಯಕರಲ್ಲವೇ? ಎಂದು ಪ್ರಶ್ನೆ ಮಾಡಿದ್ರು.

ಇದೇ ವಿಚಾರಕ್ಕೆ ಇಂದು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೋಳಿ ಸಾಹುಕಾರರು, ನಾಯಕರು. ನಾವು ಪ್ರಜೆಗಳು ಮಾತ್ರ. ಪಕ್ಷ ಏನು ಕೆಲಸ ವಹಿಸಿದೆಯೋ ಅದನ್ನು ಮಾಡ್ತೇನೆ ಅಷ್ಟೇ. ಬಳ್ಳಾರಿಯಲ್ಲೂ ದೊಡ್ಡ ದೊಡ್ಡ ನಾಯಕರಿದ್ದರು. ಮೈಸೂರು, ಗುಂಡ್ಲುಪೇಟೆ ಸೇರಿ ಹಲವು ಉಪಚುನಾವಣೆಯಲ್ಲಿ ಕೆಲಸ ಮಾಡಿ ಅಂದಿದ್ರು. ಹೋಗಿ ಅಂದ್ರೆ ಹೋಗುತ್ತೇನೆ, ಬೇಡ ಅಂದ್ರೆ ಹೋಗೋದಿಲ್ಲ. ಪಕ್ಷ ಹೇಳಿದ ಮೇಲೆ ನಾನು ಕೇಳಲೇಬೇಕಾಗುತ್ತದೆ ಎಂದರು.

ಇನ್ನು, ಕೋರ್ಟ್ ಕೇಸ್ ಇದ್ದ ಕಾರಣ ಕುಂದಗೋಳಕ್ಕೆ ಹೋಗಲು‌ ಸಾಧ್ಯವಾಗಲಿಲ್ಲ. ನಾಳೆಯೂ ವಿಚಾರಣೆ ಮುಂದುವರೆಯುತ್ತಿದೆ. ಯಾರಿಗೆ ಯಾರ ಮೇಲೆ ಪ್ರೀತಿ ಜಾಸ್ತಿ ಇರುತ್ತೋ ಅವರನ್ನ ನೆನಪಿಸಿಕೊಳ್ತಾರೆ. ಸಿ.ಎಸ್.ಶಿವಳ್ಳಿ ಹಾಗೂ ನನ್ನ ಸಂಬಂಧ ಯಾರಿಗೂ ಬಿಡಿಸಿ ಹೇಳಬೇಕಾಗಿಲ್ಲ. ಶಿವಳ್ಳಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದ್ದೇ ನಾನು ಎಂದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv