ಬರ್ತ್​ಡೇ ಬಾಯ್​ ಡಿಕೆಶಿಗೆ ಸಿಹಿ ತರುತ್ತಾ ರಿಸಲ್ಟ್..?

ರಾಜ್ಯದ ಜನ್ರಿಗೆ ಇಂದು ವಿಶೇಷ ದಿನ. ವಿಧಾನ ಸಭೆ ಚುನಾವಣೆ ಫಲಿತಾಂಶಕ್ಕಾಗಿ ಇಡೀ ದೇಶವೇ ಎದುರು ನೋಡ್ತಿದೆ. ಇಂಥ ಕಾತುರದಲ್ಲೂ ರಾಜ್ಯದ ಪವರ್ ಮಿನಿಸ್ಟರ್​​ ಡಿ.ಕೆ.ಶಿವಕುಮಾರ್​​ಗೆ ಡಬಲ್ ಸ್ಪೆಷಲ್! ಒಂದು ರಾಜಕೀಯ ಭವಿಷ್ಯ ನಿರ್ಧಾರ, ಇನ್ನೊಂದು ತಮ್ಮ 56ನೇ ಹುಟ್ಟುಹಬ್ಬದ ಖುಷಿ. ಡಿಕೆಶಿ ಹುಟ್ಟು ಹಬ್ಬದ ದಿನದಂತೆ ಚುನಾವಣಾ ಫಲಿತಾಂಶ ಪ್ರಕಟವಾಗ್ತಿರೋದು ವಿಶೇಷ. ಹುಟ್ಟುಹಬ್ಬದ ದಿನದಂದು ಶಿವಕುಮಾರ್​ಗೆ ಸಿಹಿ ಕೇಕ್ ಸಿಗುತ್ತಾ ಅನ್ನೋದು ಎಲ್ಲರ ಪ್ರಶ್ನೆ. ‘ಈ ಬಾರಿಯೂ ಸರ್ಕಾರ ರಚಿಸುತ್ತೇವೆ’ ಅನ್ನೋ ವಿಶ್ವಾಸದಲ್ಲಿರುವ ಕಾಂಗ್ರೆಸ್​ ನಾಯಕರಲ್ಲಿ ಡಿ.ಕೆ.ಶಿವಕುಮಾರ್ ಕೂಡ ಒಬ್ಬರು. ಕೆಲ ದಿನಗಳ ಹಿಂದಷ್ಟೇ ನಾನೂ ಕೂಡ ಸಿಎಂ ಆಕಾಂಕ್ಷಿ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದರು. ಒಂದು ವೇಳೆ ಕಾಂಗ್ರೆಸ್​ ಬಹುಮತ ಪಡೆದು ಸರ್ಕಾರ ರಚಿಸೋದೇ ಆದ್ರೆ, ಡಿ.ಕೆ.ಶಿವಕುಮಾರ್​ಗೆ ಉನ್ನತ ಸ್ಥಾನ ಸಿಗುವ ನಿರೀಕ್ಷೆ ಇದೆ. ಈ ಬಗ್ಗೆ ಈಗಾಗಲೇ ಅವರ ಬೆಂಬಲಿಗರಲ್ಲಿ ಇಂಥ ಚರ್ಚೆ ಕೂಡ ಶುರುವಾಗಿದೆ. ಅತಂತ್ರ ಚುನಾವಣಾ ಫಲಿತಾಂಶ ಬಂದ್ರೆ ಕಾಂಗ್ರೆಸ್​ ಜೊತೆ ಜೆಡಿಎಸ್ ಕೈ ಜೋಡಿಸಿದ್ರೆ, ಡಿ.ಕೆ.ಶಿವಕುಮಾರ್ ಸಿಎಂ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಹುಟ್ಟ ಹಬ್ಬದ ದಿನದಂದೇ ಚುನಾವಣಾ ಫಲಿತಾಂಶ ಇರೋದ್ರಿಂದ ಅವ್ರ ಅಭಿಮಾನಿಗಳಲ್ಲಿ ಹಾಗೂ ಕಾರ್ಯಕರ್ತರಲ್ಲಿ ಮತ್ತಷ್ಟು ವಿಶ್ವಾಸ ಹೆಚ್ಚಾಗಿದೆ. ರಾತ್ರೋರಾತ್ರಿ ಅವರ ಮನೆಗೆ ಜಮಾಯಿಸಿದ ನೂರಾರು ಕಾರ್ಯಕರ್ತರು ಅಭಿಮಾನಿಗಳು ಕೇಕ್ ತಿನ್ನಿಸಿ ಶುಭ ಹಾರೈಸಿದ್ದಾರೆ. ಕನಕಪುರ ಕ್ಷೇತ್ರದಲ್ಲಿ ಭದ್ರವಾಗಿ ನೆಲ ನಿಂತಿರುವ ಡಿಕೆ ಶಿವಕುಮಾರ್ ಅವರನ್ನು ಅಷ್ಟು ಸುಲಭವಾಗಿ ಅಲುಗಾಡಿಸೋದು ಅಸಾಧ್ಯ. ಕಳೆದ ಬಾರಿಯ ಅಭೂತಪೂರ್ವ ಗೆಲುವಿನ ನಿರೀಕ್ಷೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಇದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv