ಡಿ.ಕೆ ಶಿವಕುಮಾರ್ ಹುಟ್ಟು ಹಬ್ಬ, ಚಿನ್ನದ ಉಂಗುರ ನೀಡಿ ಶ್ರೀಗಳಿಂದ ಆಶೀರ್ವಾದ

ಗದಗ: ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಹುಟ್ಟುಹಬ್ಬವನ್ನ ತಾಲೂಕಿನ ಲಕ್ಷ್ಮೇಶ್ವರದಲ್ಲಿರುವ ವೀರಶೈವ ಲಿಂಗಾಯತ ಮಠ ‘ಮುಕ್ತಿ ಮಂದಿರ’ದಲ್ಲಿ ಸಂಭ್ರಮದಿಂದ ಆಚರಿಸಿಕೊಂಡರು.

ಉಂಗುರ ನೀಡಿ ಆಶೀರ್ವಾದ ಮಾಡಿದ ಶ್ರೀಗಳು
ಬರ್ತ್​​ಡೇ ಹಿನ್ನೆಲೆಯಲ್ಲಿ ಸಚಿವರು ಇಂದು ಮಧ್ಯಾಹ್ನ ಮುಂದಿರಕ್ಕೆ ಭೇಟಿ ನೀಡಿದರು. ಈ ವೇಳೆ ಪೂರ್ಣ ಕುಂಭ ಹೊತ್ತ ನೂರಾರು ಮಹಿಳೆಯರು, ಅಭಿಮಾನಿಗಳು ಶಿವಕುಮಾರ್​​ಗೆ ಸ್ವಾಗತ ಕೋರಿದರು. ನಂತರ ವಿಮಲ ರೇಣುಕಾ ಶಿವಾಚಾರ್ಯ ಶ್ರೀಗಳು ಸಚಿವರಿಗೆ ಶಾಲು ಹಾಕಿ ಬರಮಾಡಿಕೊಂಡರು. ಜೊತೆಗೆ ಡಿಕೆಎಸ್​​ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು, ಆಶೀರ್ವಾದ ಮಾಡಿದರು. ಇದೇ ವೇಳೆ ರಂಭಾಪುರಿ ಲಿಂಗೈಕ್ಯ ವೀರಗಂಗಾಧರ ಶಿವಾಚಾರ್ಯ ಗದ್ದುಗೆ ದರ್ಶನವನ್ನ ಡಿಕೆ ಶಿವಕುಮಾರ್ ಪಡೆದರು.

ಧಾರವಾಡ ಪೇಡ ಹಂಚಿ ಸಂಭ್ರಮ
ಮುಕ್ತಿ ಮಂದಿರದಲ್ಲಿ ಡಿ.ಕೆ ಶಿವಕುಮಾರ್ ಬರ್ತ್​​ಡೇ ಆಚರಣೆ ಹಿನ್ನೆಲೆಯಲ್ಲಿ ನೂರಾರು ಮಕ್ಕಳು, ಮಹಿಳೆಯರು ಹಾಗೂ ಅಭಿಮಾನಿಗಳು ಆಗಮಿಸಿದ್ದರು. ಶಿವಕುಮಾರ್ ಅಭಿಮಾನಿಗಳು ಧಾರವಾಡ ಪೇಡ ಹಂಚಿ ಸಂಭ್ರಮ ಪಟ್ಟರು.

ಇದೊಂದು ಪವಿತ್ರ ಕ್ಷೇತ್ರ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಕ್ಷೇತ್ರ ಇದು. ನನಗೆ ಇಷ್ಟವಾದಂತಹ ಕ್ಷೇತ್ರಕ್ಕೆ ಬಂದು ಆಶೀರ್ವಾದ ಪಡೆದುಕೊಂಡಿದ್ದೇನೆ. ದೇವಸ್ಥಾನಕ್ಕೆ ಆಗಮಿಸಿ ನನ್ನ ಇಷ್ಟಾರ್ಥಗಳನ್ನು ಕೇಳಿಕೊಂಡಿದ್ದೇನೆ. ಕುಂದಗೋಳ ಕ್ಷೇತ್ರದ ಜನ ನಮ್ಮನ್ನ ಕೈಬಿಡಲ್ಲ ಅನ್ನೋ ನಂಬಿಕೆ ಇದೆ. ರಾಜಕೀಯ ವಿಚಾರವಾಗಿ ಉತ್ತರ ನೀಡಲ್ಲ. ಈ ಕ್ಷೇತ್ರಕ್ಕೆ ಬಂದಿರುವುದು ರಾಜಕೀಯ ಮಾತನಾಡುವುದಕ್ಕಲ್ಲ.
-ಡಿಕೆ ಶಿವಕುಮಾರ್, ಜಲಸಂಪನ್ಮೂಲ ಸಚಿವ


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv