600 ಕೋಟಿ ಆಸ್ತಿಯ ಒಡೆಯ ಪವರ್‌ ಮಿನಿಸ್ಟರ್‌ ಡಿಕೆಶಿ

ರಾಮನಗರ: ಕಾಂಗ್ರೆಸ್‌ನ ನಾಯಕರಲ್ಲಿ ಅತ್ಯಂತ ಪವರ್ ಫುಲ್‌ ಮಿನಿಸ್ಟರ್ ಅಂತಾನೇ ಕರೆಯಲಾಗುವ ಡಿ.ಕೆ. ಶಿವಕುಮಾರ್‌ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ಘೋಷಿಸಿಕೊಂಡಿರುವ ಆಸ್ತಿ ಮೌಲ್ಯ ಬರೋಬ್ಬರಿ 619 ಕೋಟಿ ರೂಪಾಯಿಗಳು.

ಡಿ.ಕೆ. ಶಿವಕುಮಾರ್ ಸ್ಥಿರಾಸ್ತಿ ಮೌಲ್ಯ 548.80 ಕೋಟಿ ರೂ. ಡಿಕೆಶಿ ಹತ್ತಿರ 2.18 ಕೋಟಿ ಚಿನ್ನ ಹಾಗೂ ರೋಲೆಕ್ಸ್‌ ವಾಚ್‌ ಇದೆ. ಪುತ್ರಿ ಐಶ್ವರ್ಯ ಹೆಸರಲ್ಲಿ 107 ಕೋಟಿ ಹಾಗೂ ಪತ್ನಿ ಹೆಸರಿನಲ್ಲಿ 111 ಕೋಟಿ ಆಸ್ತಿ ಇದೆ ಅಂತಾ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ವಿವರವನ್ನು ನೀಡಿದ್ದಾರೆ.

2013ರಲ್ಲಿ 251 ಕೋಟಿ ಇದ್ದ ಆಸ್ತಿ ಈ ಸಲ 619 ಕೋಟಿಯಾಗಿದ್ದು, ಬರೋಬ್ಬರಿ 368 ಕೋಟಿ ರೂಪಾಯಿಗಳಷ್ಟು ಆಸ್ತಿ ಹೆಚ್ಚಳವಾಗಿದೆ.

Leave a Reply

Your email address will not be published. Required fields are marked *