ಬಿಜೆಪಿಗೆ ‘ಚಂದ್ರ’ಘಾತದ ಹಿಂದೆ ಇರೋದು ಡಿ.ಕೆ ಬ್ರದರ್ಸ್‌..?

ರಾಜಕೀಯ ಪಡಸಾಲೆಯಲ್ಲಿ ಇವತ್ತಾದ ಬೆಳವಣಿಗೆ ನಿರೀಕ್ಷೆಗೂ ಮೀರಿದ್ದು. ಯಾರ ಊಹೆಗೂ ನಿಲುಕದ್ದು. ರಾಜಕೀಯದಲ್ಲಿ ಯಾವ ಕ್ಷಣದಲ್ಲಿ ಏನ್‌ ಬೇಕಾದ್ರೂ ನಡೀಬಹುದು ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್‌ ಎಕ್ಸಾಂಪಲ್‌ ಸಿಗೋಕೆ ಚಾನ್ಸೇ ಇಲ್ಲವೇನೋ.  ಆದ್ರೆ ಚುನಾವಣೆಗೆ ಎರಡು ದಿನ ಇರೋ ಟೈಮಲ್ಲಿ ಚಂದ್ರಶೇಖರ್‌ ಬಿಜೆಪಿಗೆ ಹೀಗೆ ಮರ್ಮಾಘಾತ ನೀಡೋದ್ರ ಹಿಂದೆ ಇರೋದು ಡಿಕೆ ಬ್ರದರ್ಸ್‌ ಗೇಮ್‌ ಪ್ಲ್ಯಾನ್‌ ಅಂತಾನೆ ಬಣ್ಣಿಸಲಾಗ್ತಿದೆ.

ಚಂದ್ರಶೇಖರ್ ಬಿಜೆಪಿಗೆ ಸೇರಿಸಿದ್ದೇ ಡಿಕೆ ಬ್ರದರ್ಸ್..?

ಯಸ್‌.. ಇಂಥಾದ್ದೊಂದು ಮಾತು ಈಗ ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ಕೇಳಿಬರ್ತಿದೆ. ಜಮಖಂಡಿ ಒಂದು ಗೆಲ್ಲಿಸಿಕೊಡಿ, ನವೆಂಬರ್‌ 6ರ ನಂತ್ರ ಏನ್‌ ನಡೆಯುತ್ತೆ ನೋಡಿ, ದೋಸ್ತಿ ಸರ್ಕಾರ ಮಗುಚುತ್ತೆ, ಬಿಜೆಪಿಯ ಲೆಕ್ಕ 113 ಆಗುತ್ತೆ ಅಂತ ಹೇಳಿಕೊಂಡು ತಿರುಗುತ್ತಿರೋ ಬಿಜೆಪಿ ನಾಯಕರಿಗೆ ಡಿಕೆಶಿ ಬ್ರದರ್ಸ್‌ ಮರ್ಮಾಘಾತ ನೀಡಿದ್ದಾರೆ. ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಕಣಕ್ಕಿಳಿಸಿದ್ದ ಕಾಂಗ್ರೆಸ್‌ನಿಂದ ವಲಸೆ ಬಂದಿದ್ದ ಅಭ್ಯರ್ಥಿ ಎಲ್‌.ಚಂದ್ರಶೇಖರ್‌ ಬಿಜೆಪಿಗೆ ಕೈಕೊಟ್ಟಿದ್ದಾರೆ. ಆದ್ರೆ ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯರಾದ ಸಿ.ಎಂ.ಲಿಂಗಪ್ಪರ ಪುತ್ರರಾದ ಚಂದ್ರಶೇಖರ್‌ನ ಬಿಜೆಪಿ ಸೇರುವಂತೆ ಮಾಡಿದ್ದೇ ಡಿಕೆ ಬ್ರದರ್ಸ್‌ ಎನ್ನಲಾಗುತ್ತಿದೆ. ಇದೆಲ್ಲಾ ಡಿಕೆಶಿ ಸಹೋದರರ ತಂತ್ರಗಾರಿಕೆ ಅಂತ ಹೇಳಲಾಗ್ತಿದೆ. ಮೊದಲು ಬಿಜೆಪಿ ಸೇರಿಸಿದ್ರು, ಚುನಾವಣೆಗೆ ಎರಡು ದಿನ ಇರೋವಾಗ ಮತ್ತೆ ಪಕ್ಷಕ್ಕೆ ಕರೆಸಿಕೊಂಡು ಬಿಜೆಪಿಗೆ ಶಾಕ್‌ ನೀಡಿದ್ರು ಅಂತ ಹೇಳಲಾಗ್ತಿದೆ.

ಆಪರೇಷನ್ಕಮಲಕ್ಕೆ ಆಪರೇಷನ್..!

ಆಪರೇಷನ್‌ ಕಮಲ ಹೆಸರಲ್ಲಿ ದೋಸ್ತಿಗಳಲ್ಲಿ ನಡುಕ ಹುಟ್ಟಿಸಿತ್ತು ಬಿಜೆಪಿ. ಆಗೊಮ್ಮೆ, ಈಗೊಮ್ಮೆ ಈ ಬಗ್ಗೆ ಹೇಳಿಕೆ ಕೊಡ್ತಾ ನೋಡ್ತಾ ಇರಿ, ಸರ್ಕಾರ ಉರುಳಿಸಿ ಬಿಡ್ತೀವಿ ಅನ್ನೋ ಸಂದೇಶ ಕೂಡ ಕೊಟ್ಟಿತ್ತು. ಆದ್ರೆ ಇವತ್ತು ಆಪರೇಷನ್‌ ಕಮಲ ಮಾಡ್ತಿದ್ದ ಬಿಜೆಪಿಗೆ ಡಿ.ಕೆ ಬ್ರದರ್ಸ್‌ ಶಾಕ್‌ ಕೊಟ್ಟಿದ್ದಾರೆ.  ಡಿ.ಕೆ ಬ್ರದರ್ಸ್‌ ಈ ಗೇಮ್‌ ಪ್ಲ್ಯಾನ್‌, ಚಂದ್ರಶೇಖರ್‌ ಕಣದಿಂದ ಹಿಂದೆ ಸರಿದಿದ್ದು ಆನ್‌ ಲಾರ್ಜರ್‌ ಸ್ಕೇಲ್‌ ಬಿಜೆಪಿ ಮೇಲೆ ಯಾವ ರೀತಿಯ ಎಫೆಕ್ಟ್‌ ಮಾಡುತ್ತೆ, ಉಪ ಸಮರದ ಮೇಲೆ ಯಾವ ಪರಿಣಾಮ ಬೀರುತ್ತೆ ನೋಡ್ಬೇಕು.