ಗ್ರೇಟ್​ ಎಸ್ಕೇಪ್: ಈಜುತ್ತಿದ್ದ ಸ್ಕೂಬಾ ಡೈವರ್​ ಮೇಲೆ ಶಾರ್ಕ್​​ ದಾಳಿ..!

ಸ್ಕೂಬಾ ಡೈವರ್​ ಮೇಲೆ ಶಾರ್ಕ್​ ಮೀನೊಂದು ದಾಳಿ ಮಾಡುವ ವಿಡಿಯೋ ವೈರಲ್ ಆಗಿದೆ. ಈಜಿಪ್ಟ್​​ನ ಸಮುದ್ರವೊಂದರಲ್ಲಿ ಅಲೆಕ್ಸಾಂಡರ್​​ ಕ್ರಯಿಕಲ್​ ಅನ್ನೋರು ಡೈವಿಂಗ್ ಮಾಡುತ್ತಿದ್ದರು. ನೀರಿನಲ್ಲಿ ಈಜುತ್ತಿದ್ದಾಗ ಅಲ್ಲಿಗೆ ಧಾವಿಸಿದ ಶಾರ್ಕ್​, ತನ್ನ ಚೂಪಾದ ಹಲ್ಲುಗಳಿಂದ ಅವರ ತೊಡೆಯ ಭಾಗದ ಮೇಲೆ ಕುಕ್ಕಿದೆ. ಗಾಬರಿಗೊಂಡ ಅವ್ರು ಕೂಡಲೇ ಮೇಲೆ ಬಂದಿದ್ದಾರೆ. ನಂತರ ಅಲೆಕ್ಸಂಡರ್​ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ವಾಪಸ್​ ಆಗಿದ್ದಾರೆ. ಇನ್ನು ಈ ಘಟನೆ 2018ರಲ್ಲಿ ನಡೆದಿದೆ ಎನ್ನಲಾಗಿದ್ದು, ವಿಡಿಯೋ ಈಗ ವೈರಲ್ ಆಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv