ಫೇಲಾದವನೇ ಪಾಸ್‌ ಆಗೋದು ಹೊಡಿ 9! ಇದು ಭಟ್ರು ಪಾಠ!

ಇವತ್ತು 2018-19ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯಲ್ಲಿ ಪಾಸ್ ಆದೋರು ಮುಂದೆ ಏನ್ ಮಾಡೋದು ಅಂತಾ ತಲೆ ಕೆಡೋಸ್ಕಂಡವ್ರೆ. ಇನ್ನು ಕೆಲವ್ರು ಫೇಲಾಗಿರೋದು ಬೇಜರಾಗವ್ರೇ. ಈ ವಿದ್ಯಾರ್ಥಿಗಳಿಗೆ ವಿಕಟ ಕವಿ ಯೋಗರಾಜ್ ಭಟ್ರು, ವಿಭಿನ್ನ ಬರಹದ ಮೂಲಕ ಬದುಕಿನ ಹೊಸ ಮಂತ್ರ ಪಠಣ ಮಾಡಿದ್ದಾರೆ.

ರಿಸಲ್ಟ್ ಏನೇ ಬರ್ಲಿ ತಲೆ ಕೆಡುಸ್ಕೋಬೇಡಿ..!
PUC ಹುಡುಗ ಹುಡುಗಿಯರಿಗೆ ಜೈ.! ಇವತ್ತು ಪಿಯುಸಿ ಫಲಿತಾಂಶ ಬಂದಿದೆ. ರಿಸಲ್ಟ್ ಏನೇ ಬರ್ಲಿ ತಲೆ ಕೆಡುಸ್ಕೋಬೇಡಿ. ಯಾಕೆಂದ್ರೆ ಏನೇ ರಿಸಲ್ಟ್ ಬಂದ್ರೂ ಅದು “THE END” ಅಂತ ಅಲ್ಲ. ಫೇಲಾದವ್ನೆ ಪಾಸಾಗೋದು ಹೊಡಿ 9. ಇದ್ನ ತಿಳ್ಕಂಡವ್ನೆ ಮೇಷ್ಟ್ರಾಗೋದು ಹೊಡಿ 9. ಎಜುಕೇಷನ್‌ಗಿಂತ ದೊಡ್ಡದು ಜೀವನ.. ಎಷ್ಟೊಳ್ಳೆ ಮೇಷ್ಟ್ರು ಬಂದ್ರು ಕೂಡ ಜೀವನ ಹೇಳ್ಕೊಡಕ್ಕಾಗಲ್ಲ. ಜೀವನ ಚೂರು ಅರ್ಥ ಆಗೋಕೆ ಶುರು ಆಗೋದೇ PUC & CET ರಿಸಲ್ಟ್ ದಿನ..! ಹೆಚ್ಚು ಕಮ್ಮಿ ಹದಿನೆಂಟು ತುಂಬುತ್ತಲ್ಲಾ ಆವತ್ತು..! ಅಂತಾ ಹೇಳಿದ್ದಾರೆ.

ಜೀವನದ ಅನುಭವ ಎಲ್ಲವನ್ನೂ ಕಲಿಸುತ್ತೇ!
ಈ ಜೀವನ ಎಲ್ಲಾ ಕಲಿಸುತ್ತೆ ಬದುಕೋದೊಂದನ್ನ ಬಿಟ್ಟು ಅಂತಾರೆ .ಸೋ ..ಯಾವುದೇ ಕಾರಣಕ್ಕೂ ಟೆನ್ಷನ್ ಆಗ್ಬೇಡಿ… ಒಳ್ಳೆ ಮಾರ್ಕ್ಸ್ ಬಂದ್ರೂ ಕೆಟ್ಟ ಮಾರ್ಕ್ಸ್ ಬಂದ್ರೂ ಸಮನಾಗಿ ತಗೋಳಿ. ಓದುವುದರಲ್ಲಿ ತಪ್ಪು ಮಾಡಿದ್ರೆ ತಿದ್ಕೊಳ್ಳೋ ಪ್ಲಾನ್ ಮಾಡಿ. ತುಂಬಾ ಸರಿಯಾಗಿ ಓದ್ಕೊಂಡವ್ರು, ಜಾಸ್ತಿ ಮಾರ್ಕ್ಸ್ ತಗೊಂಡವ್ರು ಅಹಂಕಾರ ಪಡ್ಬೇಡಿ. ಏನೇ ಕಿಸ್ದು ದಬ್ಬಾಕಿದ್ರೂ ಜೀವನ ತಾನಾಗೇ ಅರ್ಥ ಆಗ್ಬೇಕು. ಏನೋ ಒಂದು ಮಾಡೋವರೆಗೆ “ಅನುಭವ” ಕೂಡಾ ನಮ್ಮನ್ನ ನೋಡಿ ದೂರದಿಂದ ನಗುತ್ತೆ. ಯಾವುದಕ್ಕೂ Short Cut ಇಲ್ಲ. ಚೆನ್ನಾಗಿರಿ ಅಷ್ಟೆ ಅಂದಿದ್ದಾರೆ. ಇನ್ನು Rank ಬಂದವ್ರಿಗೆ, Distinction ಬಂದವ್ರಿಗೆ, Higher Second Class ಬಂದವ್ರಿಗೆ, Just Pass ಆದವ್ರಿಗೆ ಹಾಗೂ ಫೇಲ್ ಆದವ್ರಿಗೆಲ್ಲಾ ನನ್ನ ಶುಭಾಶಯ. ಜೀವನ ಮತ್ತು ಯೌವ್ವನ ಎರಡೂ ಸರಿ ದಾರಿಗೆ ಸಾಗಲಿ. ಸರಿಯಾಗಿ ಬದುಕೋದಕ್ಕಿಂತ ದೊಡ್ಡದು ಸದ್ಯಕ್ಕೆ ಬೇರೇನೂ ಇಲ್ಲ ಅಂತಾ ಎಲ್ಲಾ ಮಕ್ಕಳಿಗೆ ಹುರುದುಂಬಿಸಿ ಬದುಕಿನ ಪಾಠ ಮಾಡಿದ್ದಾರೆ.